ಉದ್ಯಮಿಯ 3.5 ಲಕ್ಷ ನಗದು ಕಳವು
ಬೆಂಗಳೂರು, ಜ.17: ಉದ್ಯಮಿಯೊಬ್ಬರ ಕಾರಿನಲ್ಲಿದ್ದ 3.5 ಲಕ್ಷ ರೂ. ಕಳವು ಮಾಡಿರುವ ಘಟನೆ ಇಲ್ಲಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉದ್ಯಮಿ ಬಾಬು ಎಂಬುವರು ಹಣ ಕಳೆದುಕೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಹಕಾರ ನಗರದ ಎಕ್ಸಿಸ್ ಬ್ಯಾಂಕ್‌ನಲ್ಲಿ 3.5 ಲಕ್ಷ ರೂ. ತೆಗೆದುಕೊಂಡು ತಮ್ಮ ಕಾರಿನಲ್ಲಿ ಹಿಂದಿರುಗಿದ್ದರು. ಕೊಡಿಗೆಹಳ್ಳಿಯಲ್ಲಿ ಟೀ ಕುಡಿಯಲು ಕಾರು ನಿಲ್ಲಿಸಿ ಹೊಟೇಲ್ ನತ್ತ ಬಾಬು ತೆರಳಿದ್ದಾರೆ. ಈ ವೇಳೆ ಬೈಕಿನಲ್ಲಿ ಬಂದ ಐವರು ದುಷ್ಕರ್ಮಿಗಳು, ಕಾರಿನ ಗ್ಲಾಸ್ ಒಡೆದು ಹಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದರೋಡೆಯ ಕೆಲವು ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





