ಜಲ್ಲಿಕಟ್ಟು: ಗೂಳಿ ತಿವಿತಕ್ಕೆ ಮತ್ತೋರ್ವ ಬಲಿ

ಸಾಂದರ್ಭಿಕ ಚಿತ್ರ
ಉದುಕೋಟೈ, ಜ. 17: ಪುದುಕೋಟೈ ಜಿಲ್ಲೆಯ ತಿರುಕೋಕರ್ನಮ್ ಸಮೀಪ ವಡಮಲಪುರದಲ್ಲಿ ಜಲ್ಲಿಕಟ್ಟು ಸಂದರ್ಭ ಗೂಳಿ ತಿವಿತಕ್ಕೊಳಗಾಗಿ ಪ್ರೇಕ್ಷಕನೋರ್ವ ಮೃತಪಟ್ಟಿದ್ದಾನೆ. ಮೃತಪಟ್ಟವರನ್ನು ಎಂ. ಜೀವಾ ಆಲಿಯಾಸ್ ಕುಮಾರ್ (45) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಲ್ಲಿಕಟ್ಟು ನೋಡುತ್ತಿದ್ದಾಗ ನಿರ್ಗಮನ ದ್ವಾರದ ಸಮೀಪ ಈತನಿಗೆ ಗೂಳಿ ತಿವಿಯಿತು. ಗಂಭೀರ ಗಾಯಗೊಂಡ ಕುಮಾರ್ನನ್ನು ಕೂಡಲೇ ಪುದುಕೋಟೈ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ವ್ಯೆದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಜಲ್ಲಿಕಟ್ಟಿನಲ್ಲಿ ಇತರ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲಮೇಡುವಿನಲ್ಲಿ ಸೋಮವಾರ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಸಿರವಾಯಲ್ ಗೂಳಿ ಓಟದ ಸ್ಪರ್ಧೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಪಲಕುರಿಚಿ ಜಲ್ಲಿಕಟ್ಟಿನಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
Next Story