ಅತ್ಯಾಚಾರ ‘ಸಮಾಜದ ಭಾಗ’ ಎಂದ ಪೊಲೀಸ್ ಅಧಿಕಾರಿ!

ಅಂಬಾಲಾ,ಜ.17: ಹರ್ಯಾಣದಲ್ಲಿ ಬಾಲಕಿಯರ ಅತ್ಯಾಚಾರ ಮತ್ತು ಕೊಲೆಗಳ ಇತ್ತೀಚಿನ ಘಟನೆಗಳ ಕುರಿತು ಜನರಲ್ಲಿ ಹೊಗೆಯಾಡುತ್ತಿರುವ ಆಕ್ರೋಶದ ನಡುವೆಯೇ ರಾಜ್ಯದ ಎಡಿಜಿಪಿ ಆರ್.ಸಿ.ಮಿಶ್ರಾ ಅವರು ಇಂತಹ ಘಟನೆಗಳು ಸಮಾಜದ ಭಾಗವಾಗಿವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಅತ್ಯಾಚಾರ ಮತ್ತು ಕೊಲೆಗಳ ಕುರಿತು ಮಿಶ್ರಾ ಅವರ ಸಂವೇದನಾರಹಿತ ಹೇಳಿಕೆ ಜನರನ್ನು ಇನ್ನಷ್ಟು ಕುಪಿತರನ್ನಾಗಿಸಿದೆ. ಬುಧವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಿಶ್ರಾ, ಈ ಅತ್ಯಾಚಾರ ಎನ್ನುವುದು ಸಮಾಜದ ಭಾಗವಾಗಿದೆ. ಇಂತಹ ಘಟನೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ ಎಂದು ಹೇಳಿದರು.
ತನಿಖೆ ನಡೆಸಿ,ಅಪರಾಧಿಗಳನ್ನು ಹಿಡಿದು ಅವರ ಅಪರಾಧಗಳನ್ನು ಸಾಬೀತು ಪಡಿಸುವುದು ಪೊಲೀಸರ ಕೆಲಸವಾಗಿದೆ ಮತ್ತು ಈ ನಿಟ್ಟಿನಲ್ಲಿ ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದೂ ಅವರು ಹೇಳಿದರು.
Next Story