ಗಾಂಧೀಜಿ ಮಾನವತೆಯ ಶ್ರೇಷ್ಠ ಪ್ರವಾದಿ: ನೆತನ್ಯಾಹು

ಅಹ್ಮದಾಬಾದ್, ಜ. 17: ಮಾನವತೆಯ ಶ್ರೇಷ್ಠ ಪ್ರವಾದಿಗಳಲ್ಲಿ ಮಹಾತ್ಮಾ ಗಾಂಧಿ ಕೂಡ ಒಬ್ಬರು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಂದು ಬೆಳಗ್ಗೆ ಇಲ್ಲಿಗೆ ಆಗಮಿಸಿದ ನೆತನ್ಯಾಹು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುವುದಕ್ಕಿಂತ ಮುನ್ನ ನರೇಂದ್ರ ಮೋದಿ ಜೊತೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ ಜಂಟಿಯಾಗಿ ‘ಭೇಟಿ ಪ್ರೇರಣೆ ನೀಡಿದೆ’ ಎಂಬ ಸಂದೇಶ ಬರೆದಿದ್ದಾರೆ. ಇದಕ್ಕಿಂತ ಮೊದಲು ಇಸ್ರೇಲ್ ಪ್ರಧಾನಿ ಹಾಗೂ ಅವರ ಪತ್ನಿ ಸಾಬರಮತಿ ಆಶ್ರಮದ ಆವರಣದಲ್ಲಿ 20 ನಿಮಿಷ ಕಾಲ ಕಳೆದರು.
Next Story