‘ಪದ್ಮಾವತ್’ ವಿರುದ್ಧ 4 ರಾಜ್ಯಗಳು ಹೇರಿದ್ದ ನಿಷೇಧಕ್ಕೆ ಸುಪ್ರೀಂ ತಡೆ
ದೇಶಾದ್ಯಂತ ಬಿಡುಗಡೆಗೆ ಅವಕಾಶ

ಹೊಸದಿಲ್ಲಿ, ಜ.18: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಪದ್ಮಾವತ್’ ಸಿನೆಮಾ ಪ್ರದರ್ಶನಕ್ಕೆ ರಾಜ್ಯಗಳು ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಚಿತ್ರ ಬಿಡುಗಡೆಗೆ ಅವಕಾಶ ಕಲ್ಪಿಸಿದೆ.
ಆರಂಭದಿಂದಲೂ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನಕ್ಕೆ ಆರಂಭದಲ್ಲಿ ‘ಪದ್ಮಾವತಿ’ ಎಂದು ಹೆಸರಿಡಲಾಗಿತ್ತು. ಆದರೆ ನಂತರ ಸಿನೆಮಾದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದ ಸೆನ್ಸಾರ್ ಬೋರ್ಡ್ ಸಿನೆಮಾ ಹೆಸರನ್ನು ಪದ್ಮಾವತ್ ಎಂದು ಬದಲಾಯಿಸಬೇಕು ಎಂದಿತ್ತು.
ಸೆನ್ಸಾರ್ ಮಂಡಳಿ ಸಿನೆಮಾ ಬಿಡುಗಡೆಗೆ ಸರ್ಟಿಫಿಕೇಟ್ ನೀಡಿದ್ದರೂ ಗುಜರಾತ್, ಹರ್ಯಾಣ, ರಾಜಸ್ಥಾನ ಹಾಗು ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಗೆ ನಿಷೇಧ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
Next Story