ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಾಧೀಶರನ್ನು ಭೇಟಿಯಾದ ಸಿಜೆಐ ದೀಪಕ್ ಮಿಶ್ರಾ
ಹೊಸದಿಲ್ಲಿ, ಜ.18: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸುಪ್ರೀಂ ಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರೊಂದಿಗೆ ಗುರುವಾರ ಮಾತುಕತೆ ನಡೆಸಿದರು.
ಸುಮಾರು 15 ನಿಮಿಷಗಳ ಕಾಲ ಸಿಜೆಐ ದೀಪಕ್ ಮಿಶ್ರಾ ಅವರು ಜಸ್ಟಿಸ್ ಚೆಲಮೇಶ್ವರ್, ರಾಜನ್ ಗೊಗೊಯ್, ಮದನ್ ಬಿ. ಲೋಕುರ್ ಹಾಗು ಕುರಿಯನ್ ಜೋಸೆಫ್ ಅವರ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭ ಬೇರ್ಯಾವುದೇ ನ್ಯಾಯಾಧೀಶರು ಉಪಸ್ಥಿತರಿರಲಿಲ್ಲ. ಬುಧವಾರದಂದು ಜಸ್ಟಿಸ್ ಚೆಲಮೇಶ್ವರ್ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಮಾತುಕತೆ ನಡೆದಿರಲಿಲ್ಲ.
Next Story