ಜ. 29: ಜೋಗಿಬೆಟ್ಟು ಜುಮಾ ಮಸೀದಿಯಲ್ಲಿ ರಿಫಾಯಿ ರಾತೀಬ್ ಮಜ್ಲಿಸ್
ಜೋಗಿಬೆಟ್ಟು, ಜ. 18: ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಇದರ ವತಿಯಿಂದ 'ಬೃಹತ್ ರಿಫಾಯಿ ರಾತೀಬ್ ಮಜ್ಲಿಸ್' ಕಾರ್ಯಕ್ರಮವು ಜ. 29ರಂದು ಮಗ್ರಿಬ್ ನಮಾಝ್ ಬಳಿಕ ಜೋಗಿಬೆಟ್ಟು ಮಸೀದಿ ವಠಾರದಲ್ಲಿ ನಡೆಯಲಿದೆ.
ನೂರುಲ್ ಜಲಾಲಿಯಾ ಅಲ್ ಹಾಜ್ ಅಸೈಯದ್ ಮುಹಮ್ಮದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ , ಸೈಯದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ.
ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಇದರ ಅಧ್ಯಕ್ಷ ಯು.ಇ. ಝಾಕಿರ್ ಹುಸೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಜೋಗಿಬೆಟ್ಟು ಜುಮಾ ಮಸೀದಿಯ ಖತೀಬ್ ಯು.ಕೆ. ಖಲಂದರ್ ಮದನಿ ವಿಷಯ ಮಂಡಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





