ಬಿಐಟಿ-ಬೀಡ್ಸ್: ವೃತ್ತಿಪರ ಕೋರ್ಸ್‌ಗಳ ಮಾರ್ಗದರ್ಶನ

ಬಂಟ್ವಾಳ, ಜ. 18: ಬಿಐಟಿ ಮತ್ತು ಬೀಡ್ಸ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಸಿಇಟಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್‌ಗಳ ಮಾರ್ಗದರ್ಶನ ಕಾರ್ಯಾಗಾರ ಬಂಟ್ವಾಳ ತಾಲೂಕಿನ ಮೆಲ್ಕಾರ್ ವುಮೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಸಿಇಟಿ ಪೂರಕ ಪರೀಕ್ಷೆಯನ್ನು ಬಿಐಟಿ ಕಾಲೇಜಿನ ಅಧ್ಯಾಪಕ ಇಮ್ರಾನ್ ಯು.ಎ ನಿತಿನ್, ಸುಶಾಂತ್, ಹಾಗೂ ಮುಸ್ತಫಾ ಖಲೀಲ್ ವಿಟ್ಲ ನಡೆಸಿಕೊಟ್ಟರು.
ವಿಜೇತ ವಿದ್ಯಾರ್ಥಿಗಳಾದ ಫಾತಿಮತ್ ಐಫಾ, ನಸೀಹ ಫರ್ಝಾನ ಮತ್ತು ಹಲೀಮಾ ಕೌಶರ್ ಅವರಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ವಿತರಿಸಲಾಯಿತು.
ಮೆಲ್ಕಾರ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಲತೀಫ್ ಕೇಪು, ಬಿಐಟಿ ಕಾಲೇಜಿನ ಪ್ರಾಂಶುಪಾಲ ಆ್ಯಂಟನಿ ಉಪಸ್ಥಿತರಿದ್ದರು. ಸಿಇಟಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು.
Next Story





