ಪಾಕ್ ಮೇಲೆ ಹೆಚ್ಚಿನ ಒತ್ತಡಕ್ಕೆ ಭದ್ರತಾ ಮಂಡಳಿಗೆ ನಿಕ್ಕಿ ಹೇಲಿ ಕರೆ

ನ್ಯೂಯಾರ್ಕ್, ಜ. 18: ಪಾಕಿಸ್ತಾನ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುವುದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆ ದೇಶದ ಮೇಲೆ ಹೇರುತ್ತಿರುವ ಒತ್ತಡವನ್ನು ಹೆಚ್ಚಿಸಬೇಕು ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಗುರುವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪರವಾಗಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿ ಮರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಮೇಲಿನ ಒತ್ತಡವನ್ನು ಹೆಚ್ಚಿಸುವಂತೆ ವಿಶ್ವಸಂಸ್ಥೆಯ 15 ಸದಸ್ಯರ ಭದ್ರತಾ ಮಂಡಳಿಯನ್ನು ಅಫ್ಘಾನಿಸ್ತಾನ ಕೋರಿದೆ ಎಂದು ಹೇಳಿದರು.
‘‘ಪಾಕಿಸ್ತಾನ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಅದರ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಸಲು ಒಮ್ಮತಕ್ಕೆ ಬರುವಂತೆ ಅವರು ನಮ್ಮನ್ನು ಕೋರಿದರು’’ ಎಂದು ಹೇಲಿ ತಿಳಿಸಿದರು.
ಪಾಕಿಸ್ತಾನದ ಜೊತೆಗಿನ ಸಂಬಂಧ ಸುಧಾರಣೆಗಾಗಿ 10 ಹೆಜ್ಜೆ ಮುಂದಿಡಲು ಅಫ್ಘಾನಿಸ್ತಾನ ಸಿದ್ಧವಿದೆ, ಆದರೆ ಪಾಕಿಸ್ತಾನ ನಿರಂತರವಾಗಿ ಹಿಂದಕ್ಕೆ ಹೆಜ್ಜೆ ಹಾಕುತ್ತಿದೆ ಎಂದು ಅನಿಸುತ್ತಿದೆ ಎಂದರು.
Next Story





