Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿನೋದ್ ರಾಯ್ ಹೆಗಲ ಮೇಲೆ ಬಂದೂಕಿಟ್ಟು...

ವಿನೋದ್ ರಾಯ್ ಹೆಗಲ ಮೇಲೆ ಬಂದೂಕಿಟ್ಟು ಯುಪಿಎಯನ್ನು ಕೊಲ್ಲಲಾಯಿತು: ಎ. ರಾಜಾ ಕೃತಿಯಲ್ಲಿ ಉಲ್ಲೇಖ

ವಾರ್ತಾಭಾರತಿವಾರ್ತಾಭಾರತಿ18 Jan 2018 9:57 PM IST
share
ವಿನೋದ್ ರಾಯ್ ಹೆಗಲ ಮೇಲೆ ಬಂದೂಕಿಟ್ಟು ಯುಪಿಎಯನ್ನು ಕೊಲ್ಲಲಾಯಿತು: ಎ. ರಾಜಾ ಕೃತಿಯಲ್ಲಿ ಉಲ್ಲೇಖ

ಹೊಸದಿಲ್ಲಿ, ಜ.18: ಯುಪಿಎ ಸರಕಾರದ ಪತನಕ್ಕೆ ಕಾರಣವಾಗಿದ್ದ 2 ಜಿ ಹಗರಣದಲ್ಲಿ ನಿರ್ದೋಷಿ ಎಂದು ಸಾಬೀತಾದ ಬಳಿಕ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಬರೆದಿರುವ ‘2ಜಿ ಸಾಗಾ ಅನ್‌ಫೋಲ್ಡ್ಸ್’ ಎಂಬ ಕೃತಿ ಹಲವು ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿದೆ. ತಾನೇ ಅನುಮೋದಿಸಿದ ಟೆಲಿಕಾಂ ಕಾರ್ಯನೀತಿಯನ್ನು ಸಮರ್ಥಿಸದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಾಗಿದ್ದೇಕೆ, 2ಜಿ ಹಗರಣವನ್ನು ‘ಬೆಳಕಿಗೆ’ ತರುವಲ್ಲಿ ಅಂದಿನ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ (ಸಿಎಜಿ) ವಿನೋದ್ ರಾಯ್‌ಗೆ ದುರುದ್ದೇಶ ಏನಾದರೂ ಇತ್ತೇ ಇತ್ಯಾದಿ ಪ್ರಶ್ನೆಗಳನ್ನು ಈ ಕೃತಿಯಲ್ಲಿ ಎತ್ತಲಾಗಿದೆ. 

 2 ಜಿ ಹಗರಣ ಎಂಬುದು ದೇಶದ ಆಡಳಿತವ್ಯವಸ್ಥೆಯ ಪಾವಿತ್ರ್ಯತೆಗೆ ಅಂಟಿಸಲಾದ ನಾಚಿಕೆಗೇಡಿನ ಕಳಂಕವಾಗಿದೆ ಎಂದು ತಿಳಿಸಿರುವ ರಾಜಾ, ಯುಪಿಎ 2 ಸರಕಾರವನ್ನು ಅಂತ್ಯಗೊಳಿಸಲು ರಾಜಕೀಯ ಪ್ರೇರಣೆಯಿತ್ತು. ಮಾಜಿ ಸಿಎಜಿ ವಿನೋದ್ ರಾಯ್ ಅವರ ಹೆಗಲನ್ನು ಬಂದೂಕವಿಡಲು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ತಾನು ಟೆಲಿಕಾಂ ಲಾಬಿಗಳ ವಿರುದ್ಧ ಹೋರಾಡಿ, ನ್ಯಾಯಸಮ್ಮತ ತರಂಗಗುಚ್ಛ ಹರಾಜು ಕಾರ್ಯನೀತಿಯನ್ನು ರೂಪಿಸಿದ್ದೆ ಎಂದಿದ್ದಾರೆ. ಟೆಲಿಕಾಂ ಲಾಬಿಗಳು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ)ಕೈಗೊಳ್ಳುವ ನಿರ್ಧಾರದ ಮೇಲೆ ಪ್ರಭಾವ ಬೀರಲು ಶಕ್ತವಾಗಿದ್ದವು ಎಂಬ ಅಪಪ್ರಚಾರ ನಡೆದಿತ್ತು. ಸಾಕಷ್ಟು ತರಂಗಗುಚ್ಛ ಲಭ್ಯವಿರುವ ಕಾರಣ ಹೊಸ ಸಂಸ್ಥೆಗಳಿಗೆ 2 ಜಿ ತರಂಗಗುಚ್ಛ ಹಂಚಿಕೆ ಮಾಡುವ ತನ್ನ ಪ್ರಸ್ತಾವಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಮ್ಮತಿಸಿದ್ದರು. ಆದರೆ ಬಳಿಕ ನನ್ನ ನ್ಯಾಯಸಮ್ಮತ ನಡೆಯ ಕುರಿತು ಯುಪಿಎ ಸರಕಾರ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಯಾವುದೇ ಸಮರ್ಥನೆ ನೀಡದೆ ಸುಮ್ಮನಿದ್ದುದು ರಾಷ್ಟ್ರದ ಸಂಘಟಿತ ಮನಸಾಕ್ಷಿಯ ಧ್ವನಿಯಡಗಿಸಿದ ಕ್ರಮವಾಗಿದೆ ಎಂದು ಕೃತಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ತರಂಗಗುಚ್ಛ ಹಂಚಿಕೆಯ ವಿಷಯದಲ್ಲಿ ನಡೆದ ಸಿಬಿಐ ದಾಳಿಯ ಕುರಿತು ಪ್ರಧಾನಿಗೆ ಯಾವುದೇ ಸೂಚನೆ ಇರಲಿಲ್ಲ. ಟೆಲಿಕಾಂ ಸಚಿವಾಲಯ ಹಾಗೂ ಕೆಲವು ಟೆಲಿಕಾಂ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆದ ಬಳಿಕ , 2009ರ ಅಕ್ಟೋಬರ್ 22ರಂದು ಪ್ರಧಾನಿಯವರನ್ನು ಸೌತ್‌ಬ್ಲಾಕ್‌ನಲ್ಲಿರುವ ಕಚೇರಿಯಲ್ಲಿ ಭೇಟಿಯಾಗಿದ್ದೆ. ಪಿಎಂಒ ಕಚೇರಿಯ ಅಂದಿನ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್ ಕೂಡಾ ಅಲ್ಲಿದ್ದರು. ನಾನು ಸಿಬಿಐ ದಾಳಿ ನಡೆದಿರುವ ವಿಷಯ ತಿಳಿಸಿದಾಗ ಪ್ರಧಾನಿಯವರು ಆಶ್ಚರ್ಯಚಕಿತರಾದರು ಎಂದು ರಾಜಾ ತಿಳಿಸಿದ್ದಾರೆ. ಟೆಲಿಕಾಂ ಲಾಬಿ ಹೊಸ ಸಂಸ್ಥೆಗಳಿಗೆ ಲೈಸೆನ್ಸ್ ನೀಡುವ ನಿರ್ಧಾರದ ವಿರುದ್ಧ ನಿಂತಿದ್ದವು. ತಾನು ರೂಪಿಸಿದ ಕಾರ್ಯನೀತಿ ಅಂತಿಮ ಹಂತದಲ್ಲಿದ್ದಾಗ ಪ್ರಧಾನಿ ಸಚಿವಾಲಯದಿಂದ  ಪತ್ರವೊಂದು ಬಂದಿತು. ಈ ರೀತಿಯ ಪತ್ರ ಬರೆಯಲು ಪ್ರಧಾನಿಯವರನ್ನು ಪ್ರೇರೇಪಿಸಿದ್ದು ಯಾರಾಗಿರಬಹುದು ಎಂಬುದು ಈಗಲೂ ತನಗೆ ಒಗಟಾಗಿಯೇ ಇದೆ.

ತನ್ನ ಪ್ರಕಾರ ಪ್ರಧಾನಿ ಸಹಿ ಹಾಕಿರುವ ಈ ಪತ್ರ ಖಂಡಿತಾ ಪ್ರಧಾನಿ ಕಳಿಸಿದ್ದಲ್ಲ. ಸಚಿವಾಲಯದ ಕಾರ್ಯದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡುತ್ತಾರೆ ಎಂಬುದನ್ನು ನಂಬಲು ತಾನು ತಯಾರಿರಲಿಲ್ಲ. ಟೆಲಿಕಾಂ ಸಚಿವಾಲಯದಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಯಾರೋ ಪ್ರಧಾನಿಯವರನ್ನು ನಂಬಿಸಿದ್ದರು ಎಂದು ರಾಜಾ ತಮ್ಮ ಕೃತಿಯಲ್ಲಿ ಬರೆದಿದ್ದಾರೆ.

ತನ್ನ ವಿರುದ್ಧ ಸಲ್ಲಿಸಲಾಗಿರುವ ಕ್ರಿಮಿನಲ್ ದಾವೆಯಲ್ಲಿ ರಾಯ್‌ರನ್ನು ಸಾಕ್ಷಿದಾರನಾಗಿ ಕರೆಸಿಕೊಂಡು ಪಾಟೀಸವಾಲಿಗೆ ಗುರಿಪಡಿಸಬೇಕು . ‘ಟ್ರಾಯ್’ , ಕೇಂದ್ರ ಸಚಿವ ಸಂಪುಟ, ಟೆಲಿಕಾಂ ಆಯೋಗದ ಶಿಫಾರಸುಗಳನ್ನು ಒಟ್ಟಾರೆಯಾಗಿ ಕಡೆಗಣಿಸುವಲ್ಲಿ ರಾಯ್‌ಗೆ ಯಾವ ಪ್ರೇರಣೆ ಸ್ಫೂರ್ತಿ ನೀಡಿದೆ ಎಂಬುದನ್ನು ವಿಚಾರಣೆ ನಡೆಸುವುದು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಅತ್ಯವಶ್ಯಕವಾಗಿದೆ ಎಂದು ರಾಜಾ ಅಭಿಪ್ರಾಯಪಟ್ಟಿದ್ದಾರೆ.

ಬೆಕ್ಕು ತನ್ನ ಕಣ್ಣನ್ನು ಮುಚ್ಚಿಕೊಂಡು ಬಳಿಕ ಇಡೀ ವಿಶ್ವವೇ ಕಗ್ಗತ್ತಲಿನಲ್ಲಿ ಮುಳುಗಿದೆ ಎಂಬಂತೆ ಮಾಜಿ ಸಿಎಜಿ ವರ್ತಿಸಿದ್ದಾರೆ. ತನ್ನ ಪ್ರಭಾವವನ್ನು ಬಳಸಿಕೊಂಡು ಅವರು, ಮಾಹಿತಿಯನ್ನು ಉತ್ಪ್ರೇಕ್ಷೆಗೊಳಿಸಿ ತರಂಗಗುಚ್ಛ ಹಂಚಿಕೆಯಲ್ಲಿ ಹಣ ದುರುಪಯೋಗವಾಗಿದೆ ಹಾಗೂ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ರೀತಿಯಲ್ಲಿ ಬಿಂಬಿಸಲು ಶಕ್ತರಾಗಿದ್ದಾರೆ. 1.76 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂಬ ಅವರ ಊಹೆ ಬಳಿಕ ಸುಳ್ಳೆಂದು ಸಾಬೀತಾಗಿದೆ. ಆದರೆ ಇದು ಜನತೆಯ ಮನಸ್ಸಿನಲ್ಲಿ ಅಚ್ಚೊತ್ತಿದ್ದು ತನಗೆ ಕಷ್ಟಗಳ ಪರಂಪರೆ ಎದುರಾಗಲು ಕಾರಣವಾಯಿತು ಎಂದು ರಾಜಾ ತಿಳಿಸಿದ್ದಾರೆ.

 ವಿನೋದ್ ರಾಯ್ ತನ್ನ ಕೃತಿ ‘ನಾಟ್ ಜಸ್ಟ್ ಆ್ಯನ್ ಅಕೌಂಟೆಂಟ್’ ಎಂಬ ಕೃತಿಯಲ್ಲಿ ತಾನು ದೇಶದ ಆತ್ಮಸಾಕ್ಷಿಯ ಕಾವಲುಗಾರ ಎಂಬಂತೆ ತನ್ನನ್ನು ತಾನೇ ಬಿಂಬಿಸಿಕೊಂಡಿದ್ದಾರೆ ಎಂದು ರಾಜಾ ಟೀಕಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X