ಕೊಳ್ಳೇಗಾಲ: ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ

ಕೊಳ್ಳೇಗಾಲ,ಜ.18: ನೂತನ ಪಿಂಚಣಿ ಯೋಜನೆಯಿಂದ ಬಾಧಿತರಾಗಿರುವ ನೌಕರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ 6ನೇ ವೇತನ ಆಯೋಗಕ್ಕೆ ಶಿಫಾರಸು ಮಾಡುವ ಬಗ್ಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ವತಿಯಿಂದ ಗುರುವಾರ ತಾಲೂಕು ಕಛೇರಿಯಲ್ಲಿ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾವೇಶಗೊಂಡು ನಂತರ ಗ್ರೇಡ್.2 ತಹಶೀಲ್ದಾರ್ ಮಹೇಂದ್ರ ಅವರಿಗೆ ಮನವಿ ನೀಡಿದರು.
ಕೇಂದ ಸರ್ಕಾರವು 2004ರಲ್ಲಿ ಅವೈಜ್ಞಾನಿಕ ಸಿದ್ದಾಂತ ಹಾಗೂ ಭದ್ರತೆಯಿಂದ ಕೂಡಿದ ಎನ್.ಪಿ.ಎಸ್ ಯೋಜನೆಯನ್ನು ಜಾರಿಗೊಳಿಸಿದೆ ತರುವಾಯ ಈ ಯೋಜನೆಯನ್ನು ರಾಷ್ಟ್ರದ ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯ ಸರ್ಕಾರಗಳು ನೂತನ ಪಿಂಚಣಿ ಯೋಜನೆಯನ್ನು ಅಳವಡಿಸಿಕೊಂಡಿರುತ್ತದೆ.
ಈ ಸಂಧರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಫ್ರಾನ್ಸಿಸ್ಸ್, ಕಾರ್ಯದರ್ಶಿ ಜೋಸೇಫ್ ಅಲೆಕ್ಸಾಂಡರ್, ರಾಜ್ಯ ಪರಿಷತ್ ಸದಸ್ಯ ಉಮಾಶಂಕರ್, ಪದಾಧಿಕಾರಿಗಳಾದ ಆನಂದ್‍ರಾಜ್, ಶಿವಕುಮಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬುಕಾನಿ, ಹನೂರು ಅಧ್ಯಕ್ಷ ಜಾನ್ ಬ್ರಿಟೋ, ಎನ್.ಪಿ.ಎಸ್ ಮಂಜುನಾಥ್, ಪ್ರದೀಪ್ ಹಾಗೂ ಇನ್ನಿತರರು ಹಾಜರಿದ್ದರು.







