ಮ್ಯಾನ್ಮಾರ್: ಅಗಾಧ ಪ್ರಮಾಣದ ಮಾದಕ ಪದಾರ್ಥ ವಶ
ಸಾಂದರ್ಭಿಕ ಚಿತ್ರ
ಯಾಂಗನ್ (ಮ್ಯಾನ್ಮಾರ್), ಜ. 18: ಮ್ಯಾನ್ಮಾರ್ನಲ್ಲಿ ಅಗಾಧ ಪ್ರಮಾಣದಲ್ಲಿ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪದಾರ್ಥಗಳಲ್ಲಿ 3 ಕೋಟಿ ಮೇತ್ ಗುಳಿಗೆಗಳು ಮತ್ತು ಎರಡು ಟನ್ಗೂ ಅಧಿಕ ‘ಐಸ್’ ಮತ್ತು ಹೆರಾಯಿನ್ ಸೇರಿವೆ.
ಮಂಗಳವಾರ ಇಬ್ಬರು ಶಂಕಿತರನ್ನು ಬಂಧಿಸಿದ ಬಳಿಕ, ಉತ್ತರ ಮ್ಯಾನ್ಮಾರ್ನ ದುರ್ಗಮ ಸ್ಥಳವೊಂದರಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಶಾನ್ ರಾಜ್ಯದ ಕುಟ್ಕೈ ಪಟ್ಟಣದಲ್ಲಿನ ಮನೆಯೊಂದರಲ್ಲಿ ಈ ಅಗಾಧ ಪ್ರಮಾಣದ ಮಾದಕ ಪದಾರ್ಥ ಪತ್ತೆಯಾಗಿದೆ.
‘‘ಇದು ನಮ್ಮ ದೇಶದ ಇತಿಹಾಸದಲ್ಲೇ ವಶಪಡಿಸಿಕೊಂಡ ಅತ್ಯಧಿಕ ಪ್ರಮಾಣದ ಮಾದಕ ಪದಾರ್ಥವಾಗಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Next Story