ಬಳಕೆಯಾಗಲಿರುವ ಇವಿಎಂಗಳಲ್ಲಿರಲಿದೆ ‘ಈ’ ವಿಶೇಷತೆ
ರಾಜಸ್ಥಾನ ಉಪಚುನಾವಣೆ

ಜೈಪುರ,ಜ.19: ಜ.29ರಂದು ನಡೆಯಲಿರುವ ರಾಜಸ್ಥಾನ ಉಪ ಚುನಾವಣೆಗಳಲ್ಲಿ ಬಳಕೆಯಾಗುವ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳು ಅಭ್ಯರ್ಥಿಗಳ ಹೆಸರುಗಳು ಮತ್ತು ಚುನಾವಣಾ ಚಿಹ್ನೆಗಳೊಂದಿಗೆ ಅವರ ಭಾವಚಿತ್ರಗಳನ್ನು ಹೊಂದಿರಲಿವೆ.
ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳಿದ್ದರೆ ಮತದಾರರಿಗೆ ಗೊಂದಲವನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಆಶ್ವಿನಿ ಭಗತ್ ತಿಳಿಸಿದರು.
ಧೋಲಪುರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ಪ್ರಯೋಗವನ್ನು ಮಾಡಲಾಗಿತ್ತಾದರೂ, ಈವರೆಗೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಿಯೂ ಇಂತಹ ಇವಿಎಂಗಳು ಬಳಕೆಯಾಗಿಲ್ಲ ಎಂದರು.
ಜ.29ರಂದು ಅಜ್ಮೀರ್ ಮತ್ತು ಆಲ್ವಾರ್ ಲೋಕಸಭಾ ಕ್ಷೇತ್ರಗಳು ಮತ್ತು ಮಂಡಲಗಢ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಗಳು ನಡೆಯಲಿವೆ.
Next Story





