12 ಕ್ಕೂ ಹೆಚ್ಚು ತಲೆಬುರುಡೆ ಪತ್ತೆ: ಬೆಚ್ಚಿ ಬಿದ್ದ ಸಾರ್ವಜನಿಕರು
![12 ಕ್ಕೂ ಹೆಚ್ಚು ತಲೆಬುರುಡೆ ಪತ್ತೆ: ಬೆಚ್ಚಿ ಬಿದ್ದ ಸಾರ್ವಜನಿಕರು 12 ಕ್ಕೂ ಹೆಚ್ಚು ತಲೆಬುರುಡೆ ಪತ್ತೆ: ಬೆಚ್ಚಿ ಬಿದ್ದ ಸಾರ್ವಜನಿಕರು](https://www.varthabharati.in/sites/default/files/images/articles/2018/01/19/download.jpg)
ಸಾಂದರ್ಭಿಕ ಚಿತ್ರ
ಮೈಸೂರು,ಜ.19: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಬಡವಣೆಯಾದ ವಿಜಯನಗರದ ಸದ್ವಿದ್ಯ ಶಾಲೆ ಸಮೀಪದ ರಸ್ತೆ ಬದಿಯಲ್ಲಿ 12ಕ್ಕೂ ಹೆಚ್ಚು ಮನುಷ್ಯನ ತಲೆ ಬುರುಡೆಗಳು ಕಂಡು ಬಂದು ಜನರನ್ನು ಬೆಚ್ಚಿ ಬೀಳಿಸಿದೆ. ನಂತರ ಸ್ಥಳಕ್ಕೆ ಆಗಮಿಸಿದ ವಿಜಯನಗರ ಪೊಲೀಸರು ಪರಿಶೀಲನೆ ನಡೆಸಿ, ತಲೆ ಬುರುಡೆಗಳನ್ನು ವಶಕ್ಕೆ ತೆಗೆದಿದ್ದಾರೆ.
ವಿಜಯನಗರ ರಸ್ತೆಯಲ್ಲಿ ಈ ರೀತಿ ತಲೆ ಬುರೆಡೆಗಳು ಸಿಕ್ಕಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಯಾರೋ ಮಾಟ ಮಂತ್ರ ಮಾಡಿಸಲು ಇಲ್ಲಿ ತಲೆ ಬುರುಡೆಗಳನ್ನ ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ. ಕೆಲವರು ಆಸ್ಪತ್ರೆಗಳ ಪ್ರಯೋಗಾಲಯದಲ್ಲಿನ ನಿರುಪಯುಕ್ತ ತಲೆ ಬುರುಡೆಗಳನ್ನ ಬಿಸಾಡಿರಬಹುದೆಂದು ಶಂಕಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
Next Story