ಆಧಾರ್ ಜೋಡಣೆ: ಪಿಎಫ್ ಬಹು ಖಾತೆ ರದ್ದತಿಗೆ ನೆರವು

ಕೋಲ್ಕತ್ತಾ, ಜ. 19: ಆಧಾರ್ ಜೋಡಣೆ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ ವ್ಯಕ್ತಿಯ ಬಹು ಖಾತೆ ಸಂಖ್ಯೆಗಳನ್ನು ರದ್ದುಗೊಳಿಸಲು ಸಾಧ್ಯವಾಗಲಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಶುಕ್ರವಾರ ಹೇಳಿದೆ. ಐಸಿಸಿ ಆಯೋಜಿಸಿದ್ದ ಭವಿಷ್ಯ ನಿಧಿ ಕುರಿತ ವಿಚಾರಣಾ ಸಂಕಿರಣದ ನೇಪಥ್ಯದಲ್ಲಿ ಮಾತನಾಡಿದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ನರೇಂದ್ರ ರೈ, ಪ್ರಸ್ತುತ ಪಶ್ಚಿಮಬಂಗಾಳದಲ್ಲಿ 26 ಲಕ್ಷ ಸದಸ್ಯರು ನಿಯಮಿತವಾಗಿ ಭವಿಷ್ಯ ನಿಧಿಯಲ್ಲಿ ಹಣ ಹೂಡುತ್ತಿದ್ದಾರೆ.
ಆದರೆ, ರಾಜ್ಯದಿಂದ ಒದಗಿಸಲಾದ ಭವಿಷ್ಯ ನಿಧಿ ಖಾತೆ 70 ಲಕ್ಷ ಎಂದರು. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಭವಿಷ್ಯ ನಿಧಿಯ ಬಹು ಖಾತೆ ರದ್ದುಗೊಳಿಸಲು ನೆರವಾಗಲಿದೆ ಎಂದು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ ಎಸ್.ಬಿ. ಸಿನ್ಹಾ ತಿಳಿಸಿದ್ದಾರೆ. ಉದ್ಯೋಗ ಬದಲಾಯಿಸುವುದರಿಂದ ಓರ್ವ ವ್ಯಕ್ತಿಯಲ್ಲಿ ಮೂರು ಭವಿಷ್ಯ ನಿಧಿ ಖಾತೆ ಇದೆ. ಆಧಾರ್ ಜೋಡಣೆಯಿಂದ ಇದು ಹೆಚ್ಚುವರಿ ಖಾತೆಗಳು ರದ್ದುಗೊಳ್ಳಲಿದೆ ಎಂದು ಸಿನ್ಹಾ ಹೇಳಿದ್ದಾರೆ.
Next Story