ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಎಸ್ಪಿ

ಸುಧೀರ್ ಕುಮಾರ್ ರೆಡ್ಡಿ - ಬಿ.ಆರ್. ರವಿಕಾಂತೇ ಗೌಡ
ಮಂಗಳೂರು, ಜ.20: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಕುರಿತು ರಾಜ್ಯ ಸರಕಾರ ಶನಿವಾರ ಆದೇಶವನ್ನು ಹೊರಡಿಸಿದೆ.
ಸುಧೀರ್ ಕುಮಾರ್ ರೆಡ್ಡಿ 2017ರ ಜೂನ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಅವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ.
ಪ್ರಸ್ತುತ ಬೆಳಗಾವಿಯ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಮಂಡ್ಯದ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇ ಗೌಡ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿ ಆಗಿ ನೇಮಕಗೊಂಡಿದ್ದಾರೆ.
ಪ್ರಸಿದ್ಧ ಬರಹಗಾರ ಬೆಸಗರಹಳ್ಳಿ ರಾಮಣ್ಣರ ಪುತ್ರ ರವಿಕಾಂತೇ ಗೌಡ ‘ಎನ್ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತಿ ಪಡೆದಿದ್ದಾರೆ. ರವಿಕಾಂತೇ ಗೌಡ ಸ್ವತಃ ಕವಿ ಹಾಗೂ ಗಾಯಕರಾಗಿದ್ದು, ಹಿಂದೂಸ್ತಾನ್ ಸಂಗೀತದಲ್ಲಿ ಒಲವು ಹೊಂದಿದ್ದು, ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
Next Story





