ಅನ್ಸಾರ್ ಸುಳ್ಯ ಗೋಲ್ಡನ್ ಜುಬಿಲಿ ಅಂಗವಾಗಿ ಸ್ವಚ್ಚತಾ ಆಂದೋಲನ

ಸುಳ್ಯ, ಜ. 20: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಗಾಂಧಿನಗರ ಸುಳ್ಯ ಇದರ 50ನೆ ವಾರ್ಷಿಕ ಗೋಲ್ಡನ್ ಜುಬಿಲಿ ಅಂಗವಾಗಿ ಗಾಂಧಿನಗರ ಪರಿಸರದಲ್ಲಿ ಸ್ವಚ್ಚತಾ ಆಂದೋಲನ ನಡೆಯಿತು.
ಸುಳ್ಯ ನಗರ ಪಂಚಾಯತ್‌ನ ಸಹಯೋಗದೊಂದಿಗೆ ನಡೆದ ಈ ಶುಚಿತ್ವ ಕಾರ್ಯಕ್ರಮವನ್ನು ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್ ಉದ್ಘಾಟಿಸಿದರು, ದುಆಃ ಪ್ರಾರ್ಥನೆ ನೆರೆವೇರಿಸಿ ಶುಭಹಾರೈಸಿದ ಗಾಂಧಿನಗರ ಸಹಾಯಕ ಖತೀಬ್ ಶೌಕತ್‌ಅಲಿ ಅಮಾನಿ ಮಾತನಾಡಿ ಶುಚಿತ್ವ ಈಮಾನಿನ ಅರ್ಧ ಭಾಗವಾಗಿದ್ದು ಶುಚಿತ್ವಕ್ಕೆ ಆಧ್ಯತೆ ನೀಡಿ ಪರಿಸರವನ್ನು ಸ್ವಚ್ಚವಾಗಿರಿಸಿ, ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಕೈ ಜೋಡಿಸಬೇಕು. ಶುಚಿತ್ವವನ್ನು ಪ್ರವಾದಿಯವರು ಶತಮಾನಗಳ ಹಿಂದೆಯೇ ಇಸ್ಲಾಮಿನಲ್ಲಿ ಕಲಿಸಿಕೊಟ್ಟಿರುತ್ತಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಎಂ. ಮುಸ್ತಫ ಅಧ್ಯಕ್ಷತೆ ವಹಿಸಿದ್ದರು, ಈ ಸಂಧರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ಹಾಜಿ ಮಹಮ್ಮದ್ ಬುಶ್ರಾ, ಹಾಜಿ ಹಮೀದ್ ಜನತಾ, ಹಾಜಿ ಅಬ್ದುಲ್ ಖಾದರ್ ಪಾರೆ, ಹಾಜಿ ಅಬ್ದುಲ್ ಗಫ್ಪಾರ್, ಪದಾಧಿಕಾರಿಗಳಾದ ಟಿ.ಎಂ. ಖಾಲಿದ್, ಬಿ.ಎಂ. ಹನೀಫ್, ಎನ್.ಎ. ಜುನೈದ್, ರಫೀಕ್ ಚಾಯ್ಸಾ, ಖಾದರ್ ಎಂ.ಟಿ., ಹಾಜಿ ಬಾಬಾ ಎಲಿಮಲೆ, ಮದರಸ ಉಸ್ತುವಾರಿ ಸದಸ್ಯ ಹಾಜಿ ಅಬ್ದುಲ್ ರಹಿಮಾನ್ ಕಯ್ಯಾರ್, ಗ್ರೀನ್ ವ್ಯೂವ್ ಪಿ.ಟಿ.ಎ. ಅಧ್ಯಕ್ಷ ಅಬೂಬಕರ್ ಕಲ್ಲಪಳ್ಳಿ ಮೊದಲಾದವರು ಉಪಸ್ಥಿತರಿದ್ದರು. ವ್ಯವಸ್ಥಾಪಕ ಮುನೀರ್ ಜಿ.ಕೆ. ಸ್ವಾಗತಿಸಿ, ವಂದಿಸಿದರು.







