ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕೈಗಾರಿಕ ವೀಕ್ಷಣೆ
ಮಂಗಳೂರು, ಜ. 20: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಇದರ ವಾಣಿಜ್ಯ ಸಂಘದ ವತಿಯಿಂದ ತೃತೀಯ ಬಿ.ಕಾಂ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನಕ್ಕಾಗಿ ಹೆಮ್ಮಾಡಿಯ ಖ್ಯಾತ ಉದ್ಯಮವಾದ ಸಂಜೀವಿನಿ ಪೈಪ್ಸ್ ಆ್ಯಂಡ್ ಫಿಟ್ಟಿಂಗ್ ಲಿಮಿಟೆಡ್ ಉದ್ಯಮವನ್ನು ಬೇಟಿ ಕೊಡಲಾಯಿತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ ಅಲಿಮತ್ತು ಹಂಝಾ ಇವರು ವಿದ್ಯಾರ್ಥಿಗಳಿಗೆ ಉತ್ಪಾದನಾ ಪ್ರಕ್ರಿಯೆ ಖಚ್ಛಾ ವಸ್ತುಗಳ ಬಳಕೆ ಉತ್ಪಾದನಾ ವೈವಿಧ್ಯತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಹಾಗೂ ವಾಣಿಜ್ಯ ಶಾಸ್ತ್ರ ಉನ್ಯಾಸಕಿ ಕು.ಲತಾ ಉಪಸ್ಥಿತರಿದ್ದರು.
Next Story





