Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕನ್ನಡದ ವಾಹನ ಓಡಿಸಲು ಇರಲಿ ನಮ್ಮದೇ...

ಕನ್ನಡದ ವಾಹನ ಓಡಿಸಲು ಇರಲಿ ನಮ್ಮದೇ ಹೆದ್ದಾರಿ ‘‘ಇರುವ ಆಸ್ಕಿ ಫಾಂಟು ಬಿಡು ಹರುಷಕ್ಕಿದೆ ಯೂನಿಕೋಡ್!’’

ಡಿಜಿಟಲ್ ಕನ್ನಡ

ಡಾ. ಎ. ಸತ್ಯನಾರಾಯಣಡಾ. ಎ. ಸತ್ಯನಾರಾಯಣ20 Jan 2018 7:59 PM IST
share
ಕನ್ನಡದ ವಾಹನ ಓಡಿಸಲು ಇರಲಿ ನಮ್ಮದೇ ಹೆದ್ದಾರಿ ‘‘ಇರುವ ಆಸ್ಕಿ ಫಾಂಟು ಬಿಡು ಹರುಷಕ್ಕಿದೆ ಯೂನಿಕೋಡ್!’’

ಕನ್ನಡದ ‘ನುಡಿ’ ಯೂನಿಕೋಡ್ ಫಾಂಟ್ ಬಳಸಿ ಟೈಪ್‌ಮಾಡಿದ ಪತ್ರವೊಂದನ್ನು ಎಂ.ಎಸ್.ವರ್ಡ್ ಫೈಲ್ ರೂಪದಲ್ಲಿ ಮೇಯ್ಲ ಅಟ್ಯಾಚ್‌ಮೆಂಟ್ ಕಳುಹಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ ಕೋರಲಾಗಿತ್ತು. ಆದರೆ, ಫೈಲ್ ತೆರೆದರೆ ಎಲ್ಲವೂ ಚಿಕ್ಕ ಚಿಕ್ಕ ಡಬ್ಬಿಯಾಕಾರದಲ್ಲಿ ಕಾಣುತ್ತಿದ್ದ ಕಾರಣ ಟೈಪ್‌ಮಾಡಿದವರೇ ಬಂದು ಸರಿಪಡಿಸಿಕೊಡುವಂತೆ ಸೂಚನೆ ಬಂದಿತ್ತು. ಪರಿಶೀಲಿಸಲಾಗಿ, ಅಲ್ಲಿನ ಕಂಪ್ಯೂಟರಿನಲ್ಲಿ ಯೂನಿಕೋಡ್ ಫಾಂಟ್ ಇರುವ ಇತ್ತೀಚಿನ ‘ನುಡಿ’ ಆವೃತ್ತಿ ಅಳವಡಿಸಿರಲಿಲ್ಲ. ಎಲ್ಲ ಪಠ್ಯವನ್ನು ಸೆಲೆಕ್ಟ್ ಮಾಡಿಕೊಂಡು ‘ತುಂಗಾ’ ಫಾಂಟ್‌ನ್ನು ನಿಗದಿ ಪಡಿಸಿದಾಗ ಕನ್ನಡ ಸ್ಪಷ್ಟವಾಗಿ ಮೂಡಿಬಂತು. ‘‘ಇದನ್ನು ನೀವೇ ಏಕೆ ಮಾಡಬೇಕು ಕಂಪ್ಯೂಟರ್ ತಾನೇ ಮಾಡಿಕೊಳ್ಳಲಾಗದೇ? ಇದೂ ಯೂನಿಕೋಡ್ ಫಾಂಟು ಅದೂ ಸಹ ಯೂನಿಕೋಡ್ ಫಾಂಟೇ ಅಲ್ಲವೇ? ಅಷ್ಟೆಲ್ಲಾ ಜಾಣತನ ಇರೋ ಕಂಪ್ಯೂಟರ್‌ಗೆ ಇಷ್ಟೂ ತಿಳಿಯೋಲ್ಲವೇ?’’ ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಬೇಕಾಯಿತು. ಇದಕ್ಕೆಲ್ಲಾ ಉತ್ತರಿಸುವಷ್ಟರಲ್ಲಿ ಆ ಟೈಪಿಸ್ಟ್ ಗೆ ಸಾಕುಸಾಕಾಗಿಹೋಗಿತ್ತು. ಮೇಲಾಗಿ, ಅಲ್ಲಿದ್ದ ಕೆಲವರು : ‘‘ಕಂಪ್ಯೂಟರಿನಲ್ಲಿ ಕನ್ನಡ ಅಂದರೆ ಇಷ್ಟೇ, ಬರೀ ಸಮಸ್ಯೆಗಳೇ, ಇಂಗ್ಲಿಷ್ ಎಂದರೆ ರಗಳೆ ಇಲ್ಲ ನೋಡಿ’’ ಎಂಬ ತೀರ್ಮಾನಕ್ಕೆ ಬಂದರು! ಕಂಪ್ಯೂಟರಿನಲ್ಲಿ ಕನ್ನಡ ಬಳಸುವುದು ಇನ್ನೂ ಕಷ್ಟಕರವೇ ಎಂಬ ಬಹುಜನರ ಅಭಿಪ್ರಾಯಕ್ಕೆ ಕಾರಣ ಹುಡುಕಹೊರಟರೆ ಅನೇಕ ವಿಷಯಗಳು ಹೊರಬರುತ್ತವೆ. ಕಂಪ್ಯೂಟರಿನಲ್ಲಿ ಒ.ಎಸ್. ಎಂಬುದು ಪ್ರಮುಖ ತಂತ್ರಾಂಶ ಮತ್ತು ಮೊದಲನೆಯ ತಂತ್ರಾಂಶ ಪದರ. ಉದಾಹರಣೆಗೆ, ಮೈಕ್ರೋಸಾಫ್ಟ್ ವಿಂಡೋಸ್.

ಅಪ್ಲಿಕೇಷನ್ ಸಾಫ್ಟ್‌ವೇರ್ (ಉದಾ. ಮೈಕ್ರೋಸಾಫ್ಟ್ ವರ್ಡ್) ಒ.ಎಸ್. ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಎರಡನೆಯ ತಂತ್ರಾಂಶದ ಪದರ. ಇನ್ನು ಭಾಷಾ ಲಿಪಿತಂತ್ರಾಂಶವು (ಉದಾ. ನುಡಿ) ಅಪ್ಲಿಕೇಷನ್ ಸಾಫ್ಟ್‌ವೇರ್ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಮೂರನೆಯ ತಂತ್ರಾಂಶ ಪದರ. ವಿಂಡೋಸ್, ವರ್ಡ್ ಮತ್ತು ನುಡಿ ಎಂಬ ಮೂರೂ ತಂತ್ರಾಂಶ ಪದರಗಳ ನಡುವಿನ ಸಮನ್ವಯತೆ ಇದ್ದರೆ ತೊಂದರೆ ಇಲ್ಲ. ಕಾಲಕ್ರಮೇಣ ಇವುಗಳಲ್ಲಿ ಯಾವುದಾದರೊಂದು (ವಿವಿಧ ಆವೃತ್ತಿಗಳ ಕಾರಣ) ಬದಲಾವಣೆ ಆದರೂ ಸಹ ಸಮನ್ವಯತೆಯ ಕೊರತೆ ಉಂಟಾಗುತ್ತದೆ. (ಕಂಪ್ಯಾಟಬಲಿಟಿ ಸಮಸ್ಯೆ) ಹಲವು ಸಮಸ್ಯೆಗಳು ಉಂಟಾಗುತ್ತವೆ. ಈ ಮೂರೂ ತಂತ್ರಾಂಶ ತಯಾರಕರು ಬೇರೆಬೇರೆಯವರಾಗಿದ್ದರೆ ಸಮಸ್ಯೆಗಳು ಹೆಚ್ಚು. ಎಲ್ಲ ತಂತ್ರಾಂಶ ತಯಾರಕರು ಒಬ್ಬರೇ ಆಗಿದ್ದರೆ ಅವುಗಳ ನಡುವೆ ಸಮನ್ವಯತೆ ಇರುವಂತೆ ನೋಡಿಕೊಂಡಿರುತ್ತಾರೆ. ಇಲ್ಲಿ ವಿಂಡೋಸ್ ಮತ್ತು ವರ್ಡ್ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಸಿದ್ಧಪಡಿಸಿದ್ದರೆ, ‘ನುಡಿ’ ತಂತ್ರಾಂಶ ದೇಸೀ ತಯಾರಕರದು. ಅವುಗಳನ್ನು ಸಿದ್ಧಪಡಿಸಿದ ಕಾಲಘಟ್ಟದಲ್ಲಿ ಸಮನ್ವಯವಿತ್ತಾದರೂ, ಕಾಲಕ್ರಮೇಣ ಮೂರೂ ತಂತ್ರಾಂಶಗಳ ಹೊಸ ಹೊಸ ಆವೃತ್ತಿಗಳ ಕಾರಣ ಸಮನ್ವಯತೆಗೆ ಧಕ್ಕೆಬರುವುದು ಸಹಜ. ಇದೇ ಹಲವು ಸಮಸ್ಯೆಗಳ ಮೂಲ. ನಮ್ಮ ದೇಶಕ್ಕೆ ಹೊರಗಿನಿಂದ ಬಂದ ಯಾವುದೇ ಕಾರ್ಯಕ್ಷೇತ್ರದ ತಂತ್ರಜ್ಞಾನಗಳು ಪ್ರಾದೇಶಿಕ ಭಾಷೆಗಳೊಂದಿಗೆ ಸಿದ್ಧವಾಗಿ ಬರುವುದಿಲ್ಲ.

ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನುಗಳ ಕಾರ್ಯಾಚರಣೆ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಂಗಳು - ಒ.ಎಸ್) ಮತ್ತು ಆನ್ವಯಿಕ ತಂತ್ರಾಂಶಗಳು (ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳು - ಆ್ಯಪ್‌ಗಳು) ಇದಕ್ಕೆ ಹೊರತಾಗಿಲ್ಲ. ನಮ್ಮ ಭಾಷೆಯಲ್ಲಿ ಇರದ ಅವುಗಳನ್ನು ನಾವು ಯಥಾವತ್ತಾಗಿ ಬಳಸುವುದು ಅನಿವಾರ್ಯವಾಗಿತ್ತು. ಒ.ಎಸ್.ಗಳ ಮೇಲೆ ರಚಿಸಲಾದ ಕಾರ್ಯತಂತ್ರಗಳ ಮೂಲಕ ಭಾಷಾ ಲಿಪಿಗಳನ್ನು ನಾವು ಸಿದ್ಧಪಡಿಸಿಕೊಂಡು ಬಳಸುತ್ತಾ ಬಂದಿದ್ದೇವೆ. ಒ.ಎಸ್.ಗಳು ಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳನ್ನು ಸಿದ್ಧಪಡಿಸುವವರು ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು. ಅವುಗಳ ಮೇಲೆ ಕಾರ್ಯನಿರ್ವಹಿಸುವ ನಮ್ಮ ಭಾಷಾ ಲಿಪಿತಂತ್ರಾಂಶಗಳನ್ನು ತಯಾರಿಸುವವರು ದೇಸೀ ತಂತ್ರಜ್ಞರು. ಹಿಂದೆ, ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರೇ ನಮ್ಮ ಭಾಷೆಗೂ ಲಿಪಿತಂತ್ರಾಂಶವನ್ನು ಸಿದ್ಧಪಡಿಸಿ ನೀಡಿದ್ದರೆ ಇವೆಲ್ಲಾ ರಗಳೆಗಳು ಇರುತ್ತಿರಲಿಲ್ಲ. ಅವರ ಕಾರ್ಯಾಚರಣೆ ವ್ಯವಸ್ಥೆಯ ಮೇಲೆ ನಮ್ಮ ಕಾರ್ಯತಂತ್ರಗಳನ್ನು ರೂಪಿಸಿ ಬಳಸಿದ್ದೆವು. ಭಾಷಾಲಿಪಿ ಬಳಕೆಯಲ್ಲಿ ಯಶಸ್ವಿಯಾಗಿದ್ದರೂ, ಕಾಲಕಾಲಕ್ಕೆ ಅಂತಾರಾಷ್ಟ್ರೀಯ ತಂತ್ರಾಂಶಗಳಲ್ಲಿ ಉಂಟಾದ ಬದಲಾವಣೆಗಳ ಕಾರಣದಿಂದಾಗಿ ನಮ್ಮ ಕಾರ್ಯತಂತ್ರಗಳು ವಿಫಲಗೊಂಡವು. ಕನ್ನಡಕ್ಕೆ ತನ್ನದೇ ಸ್ಥಾನಮಾನಗಳು ಇರದಿದ್ದ ಕಾರಣ, ಬೇರೊಬ್ಬರ ಭಾಷೆಯ ಅಕ್ಷರಗಳ ಸ್ಥಾನಗಳಲ್ಲಿ (ಆಸ್ಕಿ ಎನ್‌ಕೋಡಿಂಗ್) ಕನ್ನಡವನ್ನು ಅಳವಡಿಸಿಕೊಂಡು ಬಳಸುತ್ತಾ ಬಂದಕಾರಣ ವಿಚಿತ್ರಲಿಪಿಗಳು (ಜಂಕ್ ಕ್ಯಾರೆಕ್ಟರ್ಸ್‌) ಮೂಡುವ ಪರಿಸ್ಥಿತಿಯು ಇನ್ನೂ ಮುಂದುವರಿದೇ ಇದೆ. ಕನ್ನಡದ ವಾಹನವನ್ನು ಓಡಿಸಲು ನಮ್ಮದೇ ಆದ ಹೆದ್ದಾರಿ ಇರಲಿಲ್ಲ, ಇನ್ನೊಬ್ಬರ ಹೆದ್ದಾರಿಯಲ್ಲಿ ನಮ್ಮ ಗಾಡಿಯನ್ನು ಓಡಿಸಿದ ಕಾರಣ ಅಪಘಾತಗಳು ಸಹಜವಾಗಿದ್ದವು. ಯೂನಿಕೋಡ್ ಶಿಷ್ಟತೆ ಜಾರಿಗೊಂಡ ನಂತರ, ಕನ್ನಡದ ಗಾಡಿಗೆ ಕನ್ನಡದ್ದೇ ಆದ ಹೆದ್ದಾರಿ ರೂಪುಗೊಂಡು ಸಂಚಾರ ಸುಗಮಗೊಂಡಿದೆ.

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ನಮ್ಮ ದೇಶೀ ಭಾಷೆಗಳನ್ನು ತಮ್ಮ ತಂತ್ರಾಂಶಗಳಲ್ಲಿ ಅಳವಡಿಸಿ ನೀಡುವುದನ್ನು ಆರಂಭಿಸಿದ ನಂತರ, ಭಾಷಾತಂತ್ರಜ್ಞಾನದ ಸಮಸ್ಯೆಗಳು ಬಗೆಹರಿದಿದ್ದರೂ, ಹೊಸತಂತ್ರಜ್ಞಾನದ ಬಳಕೆಯ ವಿಚಾರದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇದ್ದೇ ಇವೆ. ಎಲ್ಲಾ ರೀತಿಯ ತಂತ್ರಾಂಶಗಳ ಪ್ರಾದೇಶೀಕರಣದ ಅಂಗವಾಗಿ ಈಗ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ದೇಸೀ ಭಾಷೆಗಳನ್ನು ಅಳವಡಿಸಿ ನೀಡುತ್ತಿದ್ದಾರೆ. ನಮ್ಮ ದೇಸೀ ತಂತ್ರಾಂಶ ತಯಾರಕರನ್ನು ಉದ್ದೇಶಿಸಿ ಅವರು ಹೀಗೆ ಹೇಳುತ್ತಿದ್ದಾರೆ : ‘‘ಒ.ಎಸ್. ಹಂತದಲ್ಲಿ ನಾವು ಭಾಷಾತಂತ್ರಜ್ಞಾನಗಳ ಸೌಲಭ್ಯಗಳನ್ನು ಅಳವಡಿಸಿ ನೀಡುತ್ತೇವೆ. ನೀವು ನಿಮ್ಮದೇ ಆದ ಭಾಷಾ ಸಲಕರಣೆಗಳನ್ನು (ವಿವಿಧ ಭಾಷಾತಂತ್ರಾಂಶಗಳನ್ನು) ಸಿದ್ಧಪಡಿಸಿಕೊಂಡು ಬಳಕೆದಾರರಿಗೆ ನೀಡಿ’’ ಇದೊಂದು ಉತ್ತಮವಾದ ಸಲಹೆ. ಸ್ವಯಂಸೇವಾ ಸಂಸ್ಥೆಗಳ ಮೂಲಕ ಸರಕಾರಗಳು ಮತ್ತು ವಿಶ್ವವಿದ್ಯಾನಿಲಯಗಳೂ ಸಹ ಕನ್ನಡ ತಂತ್ರಾಂಶ ತಯಾರಿಕೆಗೆ ಇಳಿದಿರುವಾಗ ನಮ್ಮ ತಂತ್ರಾಂಶಗಳಿಗೆ ಮಾರುಕಟ್ಟೆ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರೆ ದೇಸೀ ತಂತ್ರಾಂಶ ತಯಾರಕರು. ಎಲ್ಲೆಲ್ಲಿಯೂ ಮೊಬೈಲ್ ಆ್ಯಪ್‌ಗಳು ಬಳಕೆಯಾಗುತ್ತಿರುವ ಕಾರಣ ಕಂಪ್ಯೂಟರ್ ಆಧಾರಿತ ತಂತ್ರಾಂಶಗಳಿಗೆ ಬಳಕೆಯ ಅವಕಾಶಗಳು ಕಡಿಮೆ ಇದೆ.

ಕಂಪ್ಯೂಟರ್ ಕ್ಷೇತ್ರದಲ್ಲಿ ನಿತ್ಯ ಹೊಸ ಹೊಸ ಆವಿಷ್ಕಾರಗಳು ನಡೆದಿವೆ. ಇಂದಿನ ತಂತ್ರಾಂಶ ನಾಳೆ ಹಳತು ಎನ್ನುವಷ್ಟು ಶೀಘ್ರವಾಗಿ ಬದಲಾವಣೆಗಳನ್ನು ಕಾಣುವ ಈ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಸ್ಥಾನಮಾನಗಳು ಕ್ರಮೇಣ ಹೆಚ್ಚಾಗುತ್ತಿವೆ. ಅಂತಾರಾಷ್ಟ್ರೀಯ ತಂತ್ರಾಂಶ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಅಂಗವಾಗಿ ಈಗ ಒ.ಎಸ್. ಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳ ಬಳಕೆದಾರರಿಗೆ ಅವರದೇ ಆದ ಭಾಷೆಗಳ ಇಂಟರ್‌ಫೇಸ್ ಒದಗಿಸಲು ‘ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳು’ (ಎಲ್.ಐ.ಪಿ.ಗಳು) ಬಂದಿವೆ. ಎಲ್ಲ ತಂತ್ರಾಂಶಗಳಲ್ಲಿ ಬಳಸಬಹುದಾದ, ಯೂನಿಕೋಡ್ ಎನ್‌ಕೋಡಿಂಗ್‌ವುಳ್ಳ, ದೇಸೀಯ ಭಾಷಾಲಿಪಿಗಳ ‘ಓಪನ್ ಟೈಪ್ ಫಾಂಟು’ಗಳು ಬಂದಿವೆ. ಟೈಪಿಂಗ್ ಮಾಡಲು ಈ ಹಿಂದಿನಿಂದ ಬಳಕೆಯಲ್ಲಿರುವ ವೈವಿಧ್ಯಮಯ ಕೀಲಿಮಣೆ ವಿನ್ಯಾಸಗಳು (ಇನ್‌ಪುಟ್ ಮೆಥೆಡ್ ಎಡಿಟರ್ - ಐ.ಎಂ.ಇ- ಕೀಬೋರ್ಡ್ ಲೇಔಟ್‌ಗಳು) ಬಂದಿವೆ. ಆದರೂ, ಕಂಪ್ಯೂಟರ್‌ಗಳಲ್ಲಿ ಕನ್ನಡ ಭಾಷಾ ಬಳಕೆಯಲ್ಲಿ ಹೊಸಹೊಸ ಸಲಕರಣೆಗಳನ್ನು ಉಪಯೋಗಿಸುವಲ್ಲಿ ನಾವು ಹಿಂದುಳಿದಿದ್ದೇವೆ ಎನ್ನಬಹುದು. ಇದಕ್ಕೆ ಅನೇಕ ಕಾರಣಗಳಿವೆ. ಬಹುಮುಖ್ಯವಾಗಿ ಹಳೆಯದನ್ನು ಬಿಟ್ಟು ಹೊಸತನ್ನು ಅಳವಡಿಸಿಕೊಳ್ಳುವ ಹಿಂಜರಿಕೆ ಮತ್ತು ಹೊಸ ಸಲಕರಣೆಗಳನ್ನು ಬಳಸುವಲ್ಲಿ ಪರಿಣತಿಯ ಕೊರತೆ ಮತ್ತು ಹೊಸ ತಂತ್ರಜ್ಞಾನದಲ್ಲಿನ ಚಿಕ್ಕಪುಟ್ಟ ಸಮಸ್ಯೆಗಳು ಇದಕ್ಕೆ ಕಾರಣವಾಗಿವೆ.

ತಂತ್ರಜ್ಞಾನ ಮತ್ತು ಸಲಕರಣೆಗಳು ಲಭ್ಯವಿದ್ದರೂ ಅವುಗಳ ಸಮಗ್ರ ಬಳಕೆಯು ಇನ್ನೂ ಆಗುತ್ತಿಲ್ಲ ಎಂದೇ ಹೇಳಬಹುದು. ಕನ್ನಡ ಭಾಷಾ ಬಳಕೆದಾರರು ಇನ್ನೂ ಹಳೆಯ ತಂತ್ರಜ್ಞಾನವನ್ನೇ ಬಳಸುತ್ತಿರುವುದು ಕಂಡುಬರುತ್ತದೆ. ಯೂನಿಕೋಡ್ ಫಾಂಟ್‌ಗಳ ಬಳಕೆಯಲ್ಲಿ ಇನ್ನೂ ಚಿಕ್ಕಪುಟ್ಟ ಸಮಸ್ಯೆಗಳಿವೆ; ಆಸ್ಕಿ ಫಾಂಟುಗಳಿಗೆ ಹೋಲಿಸಿದರೆ ಯೂನಿಕೋಡ್ ಫಾಂಟುಗಳ ಲಿಪಿಸೌಂದರ್ಯ ಚೆನ್ನಾಗಿಲ್ಲ; ಅವು ಮುದ್ರಣಕ್ಕೆ ಸಮಂಜಸವಾಗಿಲ್ಲ; ಡಿ.ಟಿ.ಪಿ. ಪ್ಯಾಕೇಜುಗಳು ಇನ್ನೂ ಯೂನಿಕೋಡ್ ಫಾಂಟುಗಳನ್ನು ಗುರುತಿಸುತ್ತಿಲ್ಲ - ಎಂಬ ಹಲವು ಕಾರಣಗಳು ಕೇಳಿಬರುತ್ತಿವೆ. ಕನ್ನಡ ಕಂಪ್ಯೂಟರ್ ಬಳಕೆದಾರರು, ಇಂದು, ಹಳೆಯದನ್ನು ಬಿಡಲಾಗದೆ ಹೊಸದಕ್ಕೆ ಹೊರಳಿಕೊಳ್ಳಲಾಗದ ಸಂಕ್ರಮಣ ಕಾಲದಲ್ಲಿ ಇದ್ದಾರೆ ಎಂದರೆ ತಪ್ಪಿಲ್ಲ. ‘‘ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು ಹರುಷಕ್ಕಿದೆ ದಾರಿ’’ ಎಂಬ ಡಿ.ವಿ.ಜಿ.ಯವರ ನುಡಿಯನ್ನು ನಾವೆಲ್ಲರೂ ನೆನೆದು, ಇರುವ ಆಸ್ಕಿ-ಫಾಂಟ್‌ನ ಭಾಗ್ಯವನ್ನು ಬಿಟ್ಟು ಯೂನಿಕೋಡ್ ಫಾಂಟ್ ಬಳಕೆಯ ಹರುಷ ಪಡೆಯಲು ಉತ್ಸುಕರಾಗಬೇಕಿದೆ. ಹಳೆಯ ತಂತ್ರಾಂಶಗಳನ್ನು ಬಿಟ್ಟು ಯೂನಿಕೋಡ್ ಆಧಾರಿತ ತಂತ್ರಾಂಶವನ್ನು ಎಲ್ಲರೂ ಬಳಸೋಣ. ಹೊಸ ತಂತ್ರಾಂಶಗಳಲ್ಲಿ ತೊಡಕುಗಳಿದ್ದರೆ, ತಯಾರಕರನ್ನು ಜಗ್ಗಿಸಿ ಕೇಳಿ, ಜಗಳವಾಡಿಯಾದರೂ ಸರಿಯೇ, ತಂತ್ರಾಂಶ ಸುಧಾರಣೆಯನ್ನು ಮಾಡಿಕೊಂಡು ಕನ್ನಡ ಬಳಕೆಯನ್ನು ಆಧುನೀಕರಿಸಿಕೊಳ್ಳೋಣ, ಸಮಸ್ಯೆಗಳಿಂದ ಹೊರಬರೋಣ ಎನ್ನುವ ನಿರ್ಣಯವನ್ನು ಎಲ್ಲರೂ ಕೈಗೊಳ್ಳಬೇಕಿದೆ.

          

share
ಡಾ. ಎ. ಸತ್ಯನಾರಾಯಣ
ಡಾ. ಎ. ಸತ್ಯನಾರಾಯಣ
Next Story
X