ಜ.21ರಂದು ಬಂಟರ ಸಂಘದ ವಾರ್ಷಿಕ ಅಧಿವೇಶನ
ಉಡುಪಿ, ಜ.20: ಉಡುಪಿ ಬಂಟರ ಸಂಘದ 23ನೇ ವರ್ಷದ ವಾರ್ಷಿಕ ಅಧಿವೇಶನವು ಜ.21ರಂದು ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಬಾಭವನ ದಲ್ಲಿ ಜರಗಲಿದೆ.
ಬೆಳಗ್ಗೆ 9 ಗಂಟೆಗೆ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯ ಕ್ರಮ, ಮಧ್ಯಾಹ್ನ 1ಗಂಟೆಗೆ ಉಡುಪಿಯ ಭಾರ್ಗವಿ ನೃತ್ಯ ತಂಡದಿಂದ ಭಾವ ಯೋಗಗಾನ ನೃತ್ಯ ಕಾರ್ಯಕ್ರಮ ಮತ್ತು ಅಪರಾಹ್ನ 2ಗಂಟೆಗೆ ವಾರ್ಷಿಕ ಅಧಿವೇಶನದ ಪ್ರಯುಕ್ತ ಸಾಧಕರಿಗೆ ಅಭಿನಂಧನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ.
ಕಾರ್ಯಕ್ರಮವನ್ನು ಬೆಂಗಳೂರು ಎಂಆರ್‌ಜಿ ಗ್ರೂಪ್ಸ್‌ನ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ವಹಿಸಲಿರುವರು. ಬಳಿಕ ಬಡಗುತಿಟ್ಟಿನ ಶ್ರೇಷ್ಠ ಕಲಾವಿದರ ಕೂಡುವಿಕೆಯಲ್ಲಿ ಬೇಡರಕಣ್ಣಪ್ಪಎಂಬ ಯಕ್ಷಗಾನ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





