ಕಳವು ಪ್ರಕರಣ: ಅಪ್ರಾಪ್ತ ಸಹಿತ ಇಬ್ಬರ ಬಂಧನ
ಕಾಪು, ಜ.20: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕಾಪು ಪೊಲೀಸರು ಇಂದು ಬೆಳಗಿನ ಜಾವ ಸಾರ್ವಜನಿಕರ ಸಹಕಾರದೊಂದಿಗೆ ಬಂಧಿಸಿರುವ ಬಗ್ಗೆ ವರದಿ ಯಾಗಿದೆ.
ಬಂಧಿತರನ್ನು ಮಲ್ಲಾರಿನ ಗುರುಪ್ರಸಾದ್ (22) ಹಾಗೂ ಅದೇ ಪರಿಸರದ ಅಪ್ರಾಪ್ತ ಬಾಲಕ ಎಂಬುದಾಗಿ ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಅವಿ ನಾಶ್ ಎಂಬಾತ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಅವರು ಕಾಪು ಪೊಲಿಪು ಲಕ್ಷ್ಮೆನಾರಾಯಣ ಭಜನಾ ಮಂದಿರದ ಕಾಣಿಕೆ ಡಬ್ಬಿ ಕಳವಿಗೆ ಯತ್ನಿಸುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಅವರು ಕಾಪು ಶ್ರೀಲಕ್ಷ್ಮೆ ಜನಾರ್ದನ ದೇವಸ್ಥಾನದ ಹುಂಡಿ ಕಳವು, ಶಿರ್ವ ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳ ಆರೋಪಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ತನಿಖೆ ನಡೆಯುತ್ತಿದೆ.





