ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿಯಾಗಿ ಮನೀಶಾ ಸಿಂಗ್
ವಾಶಿಂಗ್ಟನ್, ಜ. 20: ಭಾರತೀಯ ಅಮೆರಿಕನ್ ಮನೀಶಾ ಸಿಂಗ್ ಟ್ರಂಪ್ ಆಡಳಿತದಲ್ಲಿ ಆರ್ಥಿಕ ಮತ್ತು ವ್ಯಾಪಾರ ವ್ಯವಹಾರಗಳ ಸಹಾಯಕ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹುದ್ದೆಗೆ ನೇಮಕಗೊಂಡ ಪ್ರಥಮ ಮಹಿಳೆಯಾಗಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್ಸನ್ ಶುಕ್ರವಾರ ಮನೀಶಾ ಸಿಂಗ್ಗೆ ಪ್ರಮಾಣವಚನ ಬೋಧಿಸಿದರು.
‘‘ಅವರ ನಾಯಕತ್ವದಲ್ಲಿ ಅಮೆರಿಕದ ಬೆಳವಣಿಗೆಯನ್ನು ವೃದ್ಧಿಸಲು ಹಾಗೂ ಭವಿಷ್ಯವನ್ನು ಭದ್ರಪಡಿಸಲು ನಾವು ಕಾತರರಾಗಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಆರ್ಥಿಕ ಮತ್ತು ವ್ಯಾಪಾರ ವ್ಯವಹಾರಗಳ ಬ್ಯೂರೊ ಪ್ರಮಾಣವಚನದ ಬಳಿಕ ಟ್ವೀಟ್ ಮಾಡಿದೆ.
Next Story