Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. 11ನೇ ಬಾರಿ ನಾಲ್ಕನೇ ಸುತ್ತಿಗೆ ತಲುಪಿದ...

11ನೇ ಬಾರಿ ನಾಲ್ಕನೇ ಸುತ್ತಿಗೆ ತಲುಪಿದ ಜೊಕೊವಿಕ್

ಆಸ್ಟ್ರೇಲಿಯನ್ ಓಪನ್

ವಾರ್ತಾಭಾರತಿವಾರ್ತಾಭಾರತಿ20 Jan 2018 11:58 PM IST
share
11ನೇ ಬಾರಿ ನಾಲ್ಕನೇ ಸುತ್ತಿಗೆ ತಲುಪಿದ ಜೊಕೊವಿಕ್

ಮೆಲ್ಬೋರ್ನ್, ಜ.20: ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 11ನೇ ಬಾರಿ ನಾಲ್ಕನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಶನಿವಾರ ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ 2 ಗಂಟೆ, 21 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್‌ಗೆ ಬೆನ್ನುನೋವು ಕಾಣಿಸಿಕೊಂಡ ಹೊರತಾಗಿಯೂ ಸರ್ಬಿಯದ 21ನೇ ಶ್ರೇಯಾಂಕದ ಅಲ್ಬರ್ಟ್ ರಾಮೊಸ್-ವಿನೊಲಸ್‌ರನ್ನು 6-2, 6-3, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಎರಡನೇ ಸೆಟ್‌ನ ಆರಂಭದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಜೊಕೊವಿಕ್‌ಗೆ ಬೆನ್ನುನೋವು ಕಾಣಿಸಿಕೊಂಡಿತು. ಆಗ ಅವರಿಗೆ ಮೈದಾನದಲ್ಲಿ ವೈದ್ಯಕೀಯ ಉಪಚಾರ ನೀಡಲಾಯಿತು. ಬಲ ಮಣಿಕಟ್ಟು ನೋವಿನಿಂದಾಗಿ ಆರು ತಿಂಗಳು ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದ ಜೊಕೊವಿಕ್ ರವಿವಾರ ನಡೆಯಲಿರುವ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಚುಂಗ್ ಹಿಯೊನ್‌ರನ್ನು ಎದುರಿಸಲಿದ್ದಾರೆ. ಹಿಯೊನ್ ಅವರು ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಜಯ ಸಾಧಿಸಿದ್ದಾರೆ.

► ಫೆಡರರ್ ಪ್ರಿ-ಕ್ವಾರ್ಟರ್ ಫೆನಲ್‌ಗೆ

 ಹಾಲಿ ಚಾಂಪಿಯನ್ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್‌ನಲ್ಲಿ 16ನೇ ಬಾರಿ ಅಂತಿಮ-16ರ ಸುತ್ತಿಗೆ ಲಗ್ಗೆ ಇಟ್ಟರು. 20ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ವಿಸ್ ಸ್ಟಾರ್ ಫೆಡರರ್ ಶನಿವಾರ ನಡೆದ ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ರಿಚರ್ಡ್ ಗಾಸ್‌ಕ್ಯೂಟ್‌ರನ್ನು 6-2, 7-5, 6-4 ಸೆಟ್‌ಗಳಿಂದ ಸೋಲಿಸಿದರು.

ಫೆಡರರ್ ಫ್ರಾನ್ಸ್ ಆಟಗಾರನ ವಿರುದ್ಧ ಆಡಿರುವ 19 ಪಂದ್ಯಗಳಲ್ಲಿ ಕೇವಲ 2 ಬಾರಿ ಸೋತಿದ್ದಾರೆ. ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಆಡಿರುವ ಎಲ್ಲ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಫೆಡರರ್ ಮುಂದಿನ ಸುತ್ತಿನಲ್ಲಿ ಹಂಗೇರಿಯದ ಮಾರ್ಟನ್ ಫುಸೋವಿಕ್ಸ್ ರನ್ನು ಎದುರಿಸಲಿದ್ದಾರೆ. ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಸೋಲಿಸಿದ ದಕ್ಷಿಣ ಕೊರಿಯಾದ ಹಿಯೊನ್ ಚುಂಗ್ ಆಸ್ಟ್ರೇಲಿಯನ್ ಓಪನ್‌ನಲ್ಲಿ 4ನೇ ಸುತ್ತು ತಲುಪಿದ್ದಾರೆ. ಪ್ರಶಸ್ತಿ ಸ್ಪರ್ಧೆಯಲ್ಲಿದ್ದ ಜರ್ಮನಿ ಆಟಗಾರ ಝ್ವೆರೆವ್ ವಿರುದ್ಧ 58ನೇ ರ್ಯಾಂಕಿನ ಚುಂಗ್ 5-7, 7-6(3), 2-6, 6-3, 6-0 ಅಂತರದಿಂದ ಜಯ ಸಾಧಿಸಿದರು.

► ಡೆಲ್ ಪೊಟ್ರೊ ವಿರುದ್ಧ ಬೆರ್ಡಿಕ್‌ಗೆ ಜಯ

ಹಿರಿಯ ಆಟಗಾರ ಥಾಮಸ್ ಬೆರ್ಡಿಕ್ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ನೇರ ಸೆಟ್‌ಗಳಿಂದ ಸೋಲಿಸುವುದರೊಂದಿಗೆ 10ನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ನ 3ನೇ ಸುತ್ತಿನ ಪಂದ್ಯದಲ್ಲಿ 32ರ ಹರೆಯದ ಝೆಕ್ ಆಟಗಾರ ಬೆರ್ಡಿಕ್ 12ನೇ ಶ್ರೇಯಾಂಕದ ಡೆಲ್ ಪೊಟ್ರೊರನ್ನು 2 ಗಂಟೆ, 16 ನಿಮಿಷಗಳ ಹೋರಾಟದಲ್ಲಿ 6-3, 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಬೆರ್ಡಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡು ಬಾರಿ ಸೆಮಿ ಫೈನಲ್‌ಗೆ ತಲುಪಿದ್ದು, ಸೋಮವಾರ ನಡೆಯಲಿರುವ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಫ್ಯಾಬಿಯೊ ಫೋಗ್ನಿನಿ ಅವರನ್ನು ಎದುರಿಸಲಿದ್ದಾರೆ.

►ಬೋಪಣ್ಣ-ಎಡ್ವರ್ಡ್ ಮೂರನೇ ಸುತ್ತಿಗೆ ಲಗ್ಗೆ

 ಪುರುಷರ ಡಬಲ್ಸ್ ನಲ್ಲಿ 10ನೇ ಶ್ರೇಯಾಂಕ ಪಡೆದಿರುವ ಭಾರತದ ರೋಹನ್ ಬೋಪಣ್ಣ ಹಾಗೂ ಫ್ರಾನ್ಸ್‌ನ ಎಡ್ವರ್ಡ್ ರೋಜರ್-ವ್ಯಾಸ್ಸೆಲಿನ್ ಜೋಡಿ ಮೂರನೇ ಸುತ್ತಿಗೆ ತಲುಪಿದೆ. ಶನಿವಾರ 76 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಎಡ್ವರ್ಡ್ ಜೋಡಿ ಅರ್ಜೆಂಟೀನದ ಲಿಯೊನಾರ್ಡೊ ಮಯೆರ್ ಹಾಗೂ ಪೋರ್ಚುಗಲ್‌ನ ಜೊವೊ ಸೌಸಾರನ್ನು 6-2, 7-6(7-3)ಸೆಟ್‌ಗಳಿಂದ ಮಣಿಸಿದೆ. ಬೋಪಣ್ಣ-ಎಡೌರ್ಡ್ ಮುಂದಿನ ಸುತ್ತಿನಲ್ಲಿ ಆಸ್ಟ್ರೀಯದ ಒಲಿವೆರ್ ಮರಾಚ್ ಹಾಗೂ ಕ್ರೊಯೇಷಿಯದ ಮ್ಯಾಟ್ ಪಾವಿಕ್‌ರನ್ನು ಎದುರಿಸಲಿದ್ದಾರೆ. ಭಾರತದ ಡಿವಿಜ್ ಶರಣ್ ಹಾಗೂ ಅಮೆರಿಕದ ರಾಜೀವ್ ರಾಮ್ ಇಟಲಿಯ ಫ್ಯಾಬಿಯೊ ಫೋಗ್ನಿನಿ ಹಾಗೂ ಸ್ಪೇನ್‌ನ ಮಾರ್ಸೆಲ್‌ರನ್ನು 4-6, 7-6(7/4), 6-2 ಅಂತರದಿಂದ ಮಣಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

► ಕೆರ್ಬರ್, ಹಾಲೆಪ್ ಪ್ರಿ-ಕ್ವಾರ್ಟರ್ ಫೈನಲ್‌ಗೆ

ಕೆರ್ಬರ್

ಹಾಲೆಪ್

ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯ ರ ಸಿಂಗಲ್ಸ್ ವಿಭಾಗದಲ್ಲಿ ಆ್ಯಂಜೆಲಿಕ್ ಕೆರ್ಬರ್ ಹಾಗೂ ಸಿಮೊನಾ ಹಾಲೆಪ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು. ಜರ್ಮನಿ ಆಟಗಾರ್ತಿ ಕೆರ್ಬರ್ ಶ್ರೇಯಾಂಕದ ರಹಿತ 2008ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮರಿಯಾ ಶರಪೋವಾರನ್ನು ಕೇವಲ 64 ನಿಮಿಷಗಳಲ್ಲಿ 6-1, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ವಾರದ ಹಿಂದೆ ಟೆನಿಸ್ ರ್ಯಾಂಕಿಂಗ್‌ನಲ್ಲಿ ಅಗ್ರ-50ರಲ್ಲಿ ಸ್ಥಾನ ಪಡೆದಿದ್ದ ಶರಪೋವಾ ವರ್ಷಾರಂಭದಲ್ಲಿ ಶೆಂಝೆನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು. ಮತ್ತೊಂದೆಡೆ ಜರ್ಮನಿ ಆಟಗಾರ್ತಿ ಕೆರ್ಬರ್ ಹೋಪ್‌ಮನ್ ಕಪ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದು ಸಿಡ್ನಿ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿದ್ದರು.

ಈ ಇಬ್ಬರು ಆಟಗಾರ್ತಿಯರು ಏಳು ಬಾರಿ ಮುಖಾಮುಖಿಯಾಗಿದ್ದು ಕೆರ್ಬರ್ 4 ಬಾರಿ ಜಯ ಸಾಧಿಸಿದ್ದಾರೆ. 2015ರಲ್ಲಿ ಸ್ಟಟ್‌ಗರ್ಟ್‌ನಲ್ಲಿ ಕೊನೆಯ ಬಾರಿ ಶರಪೋವಾರನ್ನು ಸೋಲಿಸಿದ್ದರು. ಕೆರ್ಬರ್ ಮುಂದಿನ ಸುತ್ತಿನಲ್ಲಿ ಪೊಲೆಂಡ್‌ನ 26ನೇ ಶ್ರೇಯಾಂಕದ ಅಗ್ನೆಸ್ಕಾ ರಾಂಡ್ವಾಂಸ್ಕಾ ಅಥವಾ ತೈವಾನ್‌ನ ಸೀ ಸು-ವೀ ಅವರನ್ನು ಎದುರಿಸಲಿದ್ದಾರೆ.

► ಮ್ಯಾರಥಾನ್ ಪಂದ್ಯದಲ್ಲಿ ಹಾಲೆಪ್‌ಗೆ ಜಯ

ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಆಸ್ಟ್ರೇಲಿಯನ್ ಓಪನ್‌ನ ರೋಚಕ ಮ್ಯಾರಥಾನ್ ಪಂದ್ಯದಲ್ಲಿ ಲಾರೆನ್ ಡೇವಿಸ್‌ರನ್ನು 4-6, 6-4, 15-13 ಅಂತರದಿಂದ ಸೋಲಿಸಿದರು. ಈ ಮೂಲಕ ನಾಲ್ಕನೇ ಸುತ್ತು ತಲುಪಿದರು. ಮೂರು ಗಂಟೆ, 44 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೂರನೇ ಸೆಟ್‌ನಲ್ಲಿ 11-10 ಹಿನ್ನಡೆಯಿಂದ ಚೇತರಿಸಿಕೊಂಡ ರೋಮಾನಿಯ ಆಟಗಾರ್ತಿ ಹಾಲೆಪ್ 15-13 ಅಂತರದ ರೋಚಕ ಜಯ ಸಾಧಿಸಿದರು. ಹಾಲೆಪ್ ಮೊದಲ ಸೆಟ್‌ನಲ್ಲಿ 4-6 ರಿಂದ ಸೋತಿದ್ದರು. ಎರಡನೇ ಸೆಟ್‌ನ್ನು 6-4 ರಿಂದ ಗೆದ್ದುಕೊಂಡು ತಿರುಗೇಟು ನೀಡಿದರು. 26ರ ಹರೆಯದ ಹಾಲೆಪ್ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ಅಶ್ಲೆಘ್ ಬಾರ್ಟಿ ಅಥವಾ ಜಪಾನ್‌ನ ನಯೊಮಿ ಒಸಾಕಾ ಅವರನ್ನು ಎದುರಿಸಲಿದ್ದಾರೆ.

► ಪೇಸ್-ಪೂರವ್ ರಾಜಾ ಪ್ರಿ-ಕ್ವಾರ್ಟರ್‌ಫೈನಲ್‌ಗೆ

ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಪೂರವ್ ರಾಜಾ ಆಸ್ಟ್ರೇಲಿಯನ್‌ನ ಪುರುಷರ ಡಬಲ್ಸ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಶ್ರೇಯಾಂಕರಹಿತ ಭಾರತದ ಜೋಡಿ ಪೇಸ್-ರಾಜಾ ಬ್ರೆಝಿಲ್-ಬ್ರಿಟನ್‌ನ ಬ್ರುನೊ ಸೊರೆಸ್ ಹಾಗೂ ಜಮ್ಮಿ ಮರ್ರೆ ಅವರನ್ನು 7-6(3), 5-7, -6(6) ಸೆಟ್‌ಗಳಿಂದ ಮಣಿಸಿದರು.

 ವಿಶ್ವದ ನಂ.9ನೇ ಡಬಲ್ಸ್ ಆಟಗಾರನಾಗಿರುವ ಮರ್ರೆ ಹಾಗೂ ವಿಶ್ವದ 10ನೇ ಆಟಗಾರ ಸೊರೆಸ್ 2017ರಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಪೇಸ್-ರಾಜಾ ಜೋಡಿ 2017ರ ಋತುವಿನಲ್ಲಿ ಎರಡು ಚಾಲೆಂಜರ್ ಮಟ್ಟದ ಪ್ರಶಸ್ತಿಗಳನ್ನು ಜಯಿಸಿದ್ದು, ಒಟ್ಟಿಗೆ ಎರಡನೇ ಬಾರಿ ಗ್ರಾನ್‌ಸ್ಲಾಮ್ ಪಂದ್ಯ ಆಡುತ್ತಿದ್ದಾರೆ.

ಪೇಸ್-ರಾಜಾ ಮುಂದಿನ ಸುತ್ತಿನಲ್ಲಿ ಕೊಲಂಬಿಯಾದ ಜುಯಾನ್ ಸೆಬಾಸ್ಟಿಯನ್ ಹಾಗೂ ರಾಬರ್ಟ್ ಫರ್ಹಾ ಅವರನ್ನು ಎದುರಿಸಲಿದ್ದಾರೆ.

44ರ ಹರೆಯದ ಪೇಸ್ 2016ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಕೊನೆಯ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಪೇಸ್-ಮಾರ್ಸಿನ್ ಮೆಟ್ಕೋಸ್ಕಿ ಜೋಡಿ ಮೈಕ್ ಹಾಗೂ ಬಾಬ್ ಬ್ರಯಾನ್ ಬ್ರದರ್ಸ್ ವಿರುದ್ಧ ಸೋತಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X