ಉತ್ತರ ಪ್ರದೇಶ: ಪಾರ್ಕ್ ಗೋಡೆಗಳಿಗೆ, ರಸ್ತೆ ಡಿವೈಡರ್ ಗಳಿಗೆ ಕೇಸರಿ ಬಣ್ಣ!

ಹೊಸದಿಲ್ಲಿ, ಜ.21: ಹಜ್ ಭವನದ ಕಾಂಪೌಂಡ್ ನ ನಂತರ ಇದೀಗ ಉತ್ತರ ಪ್ರದೇಶದಲ್ಲಿ ಪಾರ್ಕ್ ಗಳಿಗೆ, ಡಿವೈಡರ್ ಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ.
ರಾಜ್ಯದಲ್ಲಿ ಸಿಎಂ ಆಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಮೇಲೆ ಬಸ್ ಗಳಿಗೆ, ಮುಖ್ಯಮಂತ್ರಿ ಕಚೇರಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಆನಂತರ ಹಜ್ ಭವನದ ಕಾಂಪೌಂಡ್ ಗೂ ಕೇಸರಿ ಬಣ್ಣ ಬಳಿದ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು.
ಇದೀಗ ಲಕ್ನೋದ ಗೋಮ್ತಿ ನಗರ್ ನ ಪಾರ್ಕ ಗೋಡೆಗಳಿಗೆ ಹಾಗು ಡಿವೈಡರ್ ಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಪ್ರಾಥಮಿಕ ಶಾಲೆಗಳು ಹಾಗು ಪೊಲೀಸ್ ಠಾಣೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು.
Next Story