ತಾಕತ್ತಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ದಿಸಿ : ಮುಖ್ಯಮಂತ್ರಿಗೆ ಯಡಿಯೂರಪ್ಪ ಸವಾಲು

ಚಾಮರಾಜನಗರ,ಜ.21: ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ನಿಮಗೆ ತಾಕತ್ತಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ದಿಸಿ, ಅಲ್ಲಿ ನಿಮ್ಮ ಬಂಡವಾಳ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಮರಾಜನಗರದಲ್ಲಿ ಸವಾಲು ಹಾಕಿದರು.
ಚಾಮರಾಜನಗರದ ಮಾರಿಗುಡಿ ಆವರಣದಲ್ಲಿ ನಡೆದ ಪರಿವರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಿದ್ದರಾಮಯ್ಯರವರೇ ನೀವು ವರುಣ ಕ್ಷೇತ್ರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ದಿಸಿ ಅಲ್ಲಿ ನಿಮ್ಮ ರಾಜಕಾರಣದ ಭವಿಷ್ಯ ಗೊತ್ತಾಗುತ್ತದೆ. ಅದನ್ನು ಬಿಟ್ಟು ಬೇರೆ ಎಲ್ಲೋ ಸ್ಪರ್ದೆ ಮಾಡುತ್ತೇನೆ ಅಂತ ಹೋದರೆ ನಿಮ್ಮ ನಿಲುವಲ್ಲಿ ಸ್ಪಷ್ಟತೆ ಇರುವುದಿಲ್ಲ ಎಂದು ಸವಾಲ್ ಹಾಕಿದರು.
ಇದೇ ವೇಳೆ ಚಾಮರಾಜನಗರ ತಾಲ್ಲೂಕು ಮಾದಾಪುರ ಗ್ರಾಮದಿಂದ ಚಾಮರಾಜನಗರದವರೆಗೆ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಯಡಿಯೂರಪ್ಪರವರನ್ನು ಬರಮಾಡಿಕೊಂಡರು.
Next Story





