ಮಹಾರಾಷ್ಟ್ರದಲ್ಲಿ ಲಘು ಭೂಕಂಪ

ಪುಣೆ, ಜ.21: ರವಿವಾರದಂದು ಮಹಾರಾಷ್ಟ್ರದ ಕೊಯ್ನ ಅಣೆಕಟ್ಟಿನ ಸುತ್ತಮುತ್ತಲ ಪ್ರದೇಶದಲ್ಲಿ 3.6 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಹವಾಮಾನಶಾಸ್ತ್ರ ಇಲಾಖೆ ತಿಳಿಸಿದೆ.
ರವಿವಾರ ಬೆಳಿಗ್ಗೆ ಸುಮಾರು 11.36ರ ಹೊತ್ತಿಗೆ ಕೊಯ್ನಿ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಘಟನೆಯಲ್ಲಿ ಸಾವು-ನೋವು ಸಂಭವಿಸಿರುವ ಬಗ್ಗೆ ಯಾವುದೇ ವರದಿಗಳು ಇಲ್ಲ ಎಂದು ಇಲಾಖೆ ತಿಳಿಸಿದೆ.
ಭೂಕಂಪನದ ಆಳವು ಭೂಮಿ ಮೇಲ್ಮೈಯಿಂದ ಹತ್ತು ಕಿ.ಮೀ ಕೆಳಗಿತ್ತು ಎಂದು ಇಲಾಖೆ ತಿಳಿಸಿದೆ.
Next Story