ಟ್ರಂಪ್ ವಿರುದ್ಧ ಮಹಿಳೆಯರ ಪ್ರತಿಭಟನೆ
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಹಿಳೆಯರು ಅಧ್ಯಕ್ಷರ ವಿರುದ್ಧ ಅಮೆರಿಕದಾದ್ಯಂತ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ಮಹಿಳೆಯರು ಅಧ್ಯಕ್ಷರನ್ನು ವಿರೋಧಿಸಲು ಗುಲಾಬಿ ಬಣ್ಣದ ಟೊಪ್ಪಿಗಳನ್ನು ಧರಿಸಿ ಮೆರವಣಿಗೆಯಲ್ಲಿ ಸಾಗಿದರು. ಇದು ಮಹಿಳೆಯರು ಅಧ್ಯಕ್ಷರ ವಿರುದ್ಧ ನಡೆಸುತ್ತಿರುವ 2ನೇ ಪ್ರತಿಭಟನೆಯಾಗಿದೆ. ವಾಶಿಂಗ್ಟನ್, ನ್ಯೂಯಾರ್ಕ್, ಶಿಕಾಗೊ, ಡೆನ್ವರ್, ಬಾಸ್ಟನ್, ಲಾಸ್ ಏಂಜಲಿಸ್ ಮತ್ತು ಇತರ ನಗರಗಳಲ್ಲಿ ಲಕ್ಷಾಂತರ ಮಹಿಳಾ ಪ್ರತಿಭಟನಾಕಾರರು ಜಮಾಯಿಸಿದರು.
Next Story