ಗುಂಡಿನ ದಾಳಿಗೆ ನಾಗರಿಕ ಮೃತ್ಯು: 4 ದಿನಗಳಲ್ಲಿ ಪಾಕ್ ಪುಂಡಾಟಕ್ಕೆ 12 ಬಲಿ

ಶ್ರೀನಗರ, ಜ.22: ಅಂತಾರಾಷ್ಟ್ರಿಯ ಗಡಿ ಮತ್ತು ಗಡಿ ನಿಯಂತ್ರಣಾ ರೇಖೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೈನಿಕರು ನಡೆಸುತ್ತಿರುವ ಗುಂಡಿನ ದಾಳಿ ಸತತ ನಾಲ್ಕನೇ ದಿನವೂ ಮುಂದುವರಿದಿದ್ದು, ಶನಿವಾರ ಪಾಕ್ ದಾಳಿಗೆ ಸ್ಥಳೀಯ ನಾಗರಿಕರೊಬ್ಬರು ಸಾವಿಗೀಡಾಗಿದ್ದರು,
ಇದರೊಂದಿಗೆ ಪಾಕ್ ಸೈನಿಕರ ಪುಂಡಾಟಕ್ಕೆ ಕಳೆದ ನಾಲ್ಕು ದಿನಗಳಲ್ಲಿ 12 ಮಂದಿ ಬಲಿಯಾಗಿದ್ದಾರೆ.
ಗಡಿ ನಿಯಂತ್ರಣಾ ರೇಖೆಯಲ್ಲಿರುವ ಕಾನಾಚಕ್-ಪ್ರಾಗ್ ವಾಲ್ ಸೆಕ್ಟರ್ ನಲ್ಲಿ ಶೆಲ್ ದಾಳಿಗೆ ಸಹೋದರರಿಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಪಾಕ್ ಸೈನಿಕರು ಕಳೆದ ಗುರುವಾರದಿಂದ ಈ ತನಕ ನಡೆಸಿದ ದಾಳಿಗೆ 7 ಮಂದಿ ನಾಗರಿಕರು, ಮೂವರು ಸೈನಿಕರು ಮತ್ತು ಇಬ್ಬರು ಬಿಎಸ್ ಎಫ್ ಜವಾನರು ಬಲಿಯಾಗಿದ್ದಾರೆ.
Next Story