ರೆಡ್ಡಿಗೆ ಜಾಮೀನು ಷರತ್ತಿನಲ್ಲಿ ಮಾರ್ಪಾಡಿಗೆ ಸುಪ್ರೀಂ ನಕಾರ

ಹೊಸದಿಲ್ಲಿ, ಜ.22: ಬಳ್ಳಾರಿಯ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ತಮಗೆ ನೀಡಲಾಗಿರುವ ಷರತ್ತುಬದ್ಧ ಜಾಮೀನಿನಲ್ಲಿ ಮಾರ್ಪಾಡು ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ಜನಾರ್ದನ ರೆಡ್ಡಿ ವಿರುದ್ಧ ಮೊದಲು ದೋಷಾರೋಪ ಪಟ್ಟಿ ಸಲ್ಲಿಸಲಿ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ .
ಮುಂದಿನ ಸೂಚನೆ ಬರುವವರೆಗೂ ಬಳ್ಳಾರಿಗೆ ಕಾಲಿಡಬಾರದೆಂದೂ ರೆಡ್ಡಿಗೆ ನ್ಯಾಯಾಲಯ ಆದೇಶ ನೀಡಿದೆ.
Next Story