ಹೆಗಡೆ ಬಾಯಿಂದ ಬಂದ ಹೇಳಿಕೆ ಪ್ರಧಾನಿ ಮೋದಿಯದ್ದು : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜ. 22: ‘ನಾಯಿ ಬೊಗಳಿದರೆ ತಲೆಕೆಡಿಸಿಕೊಳ್ಳುವ ಜನ ನಾವಲ್ಲ’ ಎಂದು ದಲಿತ ಸಂಘಟನೆಗಳ ಕಾರ್ಯಕರ್ತರ ಕುರಿತು ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದು, ಇಂತಹ ಹೇಳಿಕೆಗಳು ಅವರ ಬಾಯಿಂದ ಪ್ರಧಾನಿ ಮೋದಿಯವರೇ ಹೇಳಿಸುತ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮನಸ್ಸು ಮಾಡಿದ್ದರೆ ಇಂತಹ ಹೇಳಿಕೆಗಳನ್ನು ನಿಲ್ಲಿಸಬಹುದು. ಲೋಕಸಭೆ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸುವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಜನತೆಯ ಹಕ್ಕು. ಧರಣಿ ಸತ್ಯಾಗ್ರಹ, ಹೋರಾಟ ಬೇಡವೆಂದರೆ ಹೇಗೆ ಎಂದು ಪ್ರಶ್ನಿಸಿದರು.
ಅಪರಾಧಿಗಳು: ಮನುವಾದ ಪ್ರತಿಪಾದನೆ ಅನಂತಕುಮಾರ ಹೆಗಡೆಯಂಥವರ ಕೆಲಸ. ಇವರೇ ನಿಜವಾದ ಅಪರಾಧಿಗಳು. ದಲಿತ ಸಂಘಟನೆಗಳ ಕಾರ್ಯಕರ್ತರನ್ನು ನಾಯಿಗಳಿಗೆ ಹೋಲಿಕೆ ಮಾಡಿದ್ದು ಅಕ್ಷಮ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.
Next Story





