ರಾ. ಮತದಾರರ ದಿನಾಚರಣೆ: ಸ್ವೀಪ್ ಸ್ಪರ್ಧಾ ವಿಜೇತರು
ಉಡುಪಿ, ಜ.22: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿ ರುವ ವಿದ್ಯಾರ್ಥಿಗಳಿಗೆ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪ್ರಬಂಧ ಸ್ಪರ್ಧೆ, ಭಿತ್ತಿಪತ್ರ ರಚನಾ ಸ್ಪರ್ಧೆ, ಚಿತ್ರಗಾರಿಕೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸ್ಪರ್ಧೆಗಳ ಫಲಿತಾಂಶ ಹೀಗಿದೆ.
ಕನ್ನಡ ಭಾಷಣ ಸ್ಪರ್ಧೆ: ಪ್ರಥಮ: ಅಶ್ವಿನಿ ಎಸ್.ಆರ್., ಶಂಕರನಾರಾಯಣ ಪದವಿಪೂರ್ವ ಕಾಲೇಜು, ದ್ವಿತೀಯ: ನಾಗರತ್ನ, ಸರಕಾರಿ ಪದವಿ ಕಾಲೇಜು ಬೆಳ್ಮಣ್ಣು, ತೃತೀಯ: ಅನಿಲ ಪೂಜಾರಿ, ಉಡುಪಿ ಸರಾರಿ ಪದವಿ ಪೂರ್ವ ಕಾಲೇಜು ಉಡುಪಿ.
ಇಂಗ್ಲೀಷ್ ಪ್ರಬಂಧ ಸ್ಪರ್ಧೆ: ಪ್ರಥಮ: ಲಾಯಿಡ್ ಡಿಸೋಜ, ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ದ್ವಿತೀಯ: ವಿದ್ಯಾಶ್ರೀ, ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ, ತೃತೀಯ: ಪ್ರೀತಿಕಾ, ಸರಕಾರಿ ಪದವಿ ಪೂರ್ವ ಕಾಲೇಜು ವಂಡ್ಸೆ.
ಭಿತ್ತಿ ಪತ್ರ ಸ್ಪರ್ಧೆ: ಪ್ರಥಮ: ವಿಕ್ರಮ ಆಚಾರ್ಯ, ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು, ದ್ವಿತೀಯ: ವ್ನಿೇಶ್, ಸರಕಾರಿ ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ, ತೃತೀಯ: ಪೃಥ್ವಿ ಮೇರಿ, ನಿರ್ಮಲ ಪದವಿ ಪೂರ್ವ ಕಾಲೇಜು ಬ್ರಹ್ಮಾವರ.
ಚಿತ್ರಗಾರಿಕೆ ಸ್ಪರ್ಧೆ: ವಿಜಯ,ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು, ದ್ವಿತೀಯ: ಆದರ್ಶ, ಸರಕಾರಿ ಪದವಿ ಪೂರ್ವ ಕಾಲೇಜು ವಂಡ್ಸೆ, ತೃತೀಯ: ತನುಶ್ರೀ, ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ.
ಜಿಲ್ಲಾಡಳಿತ ಹಾಗೂ ಜಿಪಂಗಳ ಮಾರ್ಗದರ್ಶನಲ್ಲಿ ನಡೆದ ಸ್ಪರ್ಧೆಯಲ್ಲಿ ಉಪನ್ಯಾಸಕರಾದ ಯಾದವ್ ವಿ.ಕೆ, ಗಂಗಾಧರ ವಿ.ಎ, ದಯಾನಂದ ಡಿ. ಹಾಗೂ ನಾಗರಾಜ ನಿರ್ಣಯಕರಾಗಿ ಹಾಜರಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.







