ಉಡುಪಿ: ಬಾಲನ್ಯಾಯ ಮಂಡಳಿ ರಚನೆ
ಉಡುಪಿ, ಜ.22: ಬಾಲನ್ಯಾಯ ಕಾಯ್ದೆ 2015 ಹಾಗೂ ಕೇಂದ್ರ ಸರಕಾರ ಹೊರಡಿಸಿರುವ ಬಾಲನ್ಯಾಯ ನಿಯಮಗಳು 2016ರಡಿ ಮತ್ತು ಮಕ್ಕಳ ನ್ಯಾಯ ಕಾಯಿದೆ ಜಾರಿ ಕುರಿತು ಕರ್ನಾಟಕ ಸರಕಾರ ಹೊರಡಿಸುವ ರಾಜ್ಯ ನಿಯಮಗಳಡಿ ಕಾರ್ಯನಿರ್ವಹಿಸಲು ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲನ್ಯಾಯ ಮಂಡಳಿಗಳನ್ನು ರಚಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಯ ಸದಸ್ಯರು ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಪ್ರತೀ ಶುಕ್ರವಾರದಂದು ಮಕ್ಕಳ ಕಲ್ಯಾಣ ಸಮಿತಿ ಸಭೆ ಹಾಗೂ ಪ್ರತೀ ಬುಧವಾರದಂದು ಬಾಲ್ಯಾಯ ಮಂಡಳಿಯ ಸಭೆ ನಡೆಯಲಿವೆ.
ಮಕ್ಕಳ ಪಾಲನೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಈ ಸದಸ್ಯರನ್ನು ಮುರಳೀಧರ್ ಶೆಟ್ಟಿ-9845442450, ರೋನಾಲ್ದ್ ಬಿ. ಪುರ್ಟಾಡೋ- 9448835228, ಮೋಹನ್ ಕುಮಾರ್-9886347437,ನಾಗರತ್ನ ನಾಯ್ಕ್ -9945994275 ಹಾಗೂ ಮಕ್ಕಳ ರಕ್ಷಣಾ ಘಟಕ ರಜತಾದ್ರಿ ಮಣಿಪಾಲ (ದೂರವಾಣಿ:2574964) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಕಟಣೆ ತಿಳಿಸಿದೆ.
Next Story





