ಪ್ರತ್ಯೇಕ ಲಿಂಗಾಯತ ಧರ್ಮ: ಜ.23 ರಂದು ಮಠಾಧೀಶರುಗಳ ಸಭೆ
ಬೆಂಗಳೂರು, ಜ. 22: ‘ಪ್ರತ್ಯೇಕ ಲಿಂಗಾಯತ ಧರ್ಮ’ಕ್ಕಾಗಿ ಹೋರಾಟ ಮಾಡುತ್ತಿರುವ ನಾಯಕರು, ಹಿರಿಯರು, ತಜ್ಞರು ಹಾಗೂ ವಿವಿಧ ಮಠಾಧೀಶರುಗಳ ಸಭೆ ಜ.23 ರಂದು ಬೆಳಗ್ಗೆ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕವಾದ ಒಂದು ಪ್ರಾತಿನಿಧಿಕ ಸಂಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜ.23 ರಂದು ನಡೆಯಲಿರುವ ಸಭೆ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ ಸಚಿವರು-ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ವೇದಿಕೆ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.
Next Story





