‘ಪದ್ಮಾವತ್’ ವೀಕ್ಷಿಸಲು ನಾವು ಸಿದ್ಧ: ಕರ್ಣಿ ಸೇನಾ ನಾಯಕ

ಹೊಸದಿಲ್ಲಿ, ಜ.22: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಬಿಡುಗಡೆಗೂ ಮುನ್ನ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ರಜಪೂತ ಕರ್ಣಿ ಸೇನೆಯು ತಾನು ಚಿತ್ರ ವೀಕ್ಷಿಸಲು ತಯಾರಿರುವುದಾಗಿ ತಿಳಿಸಿದೆ.
ಜನವರಿ 25ರಂದು ‘ಪದ್ಮಾವತ್’ ಚಿತ್ರ ಬಿಡುಗಡೆಯಾಗಲಿದ್ದು, ದೇಶದ ಹಲವೆಡೆ ಚಿತ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ.
“ನಾವು ಚಿತ್ರವನ್ನು ವೀಕ್ಷಿಸಲು ತಯಾರಿದ್ದೇವೆ. ನಾವು ಚಿತ್ರ ನೋಡುವುದಿಲ್ಲ ಎಂದು ಹೇಳಿಲ್ಲ. ನಮಗಾಗಿ ಸ್ಪೆಷಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡುವುದಾಗಿ ನಿರ್ದೇಶಕರು ಒಂದು ವರ್ಷದ ಹಿಂದೆ ಹೇಳಿದ್ದರು. ನಾವೀಗ ಅದಕ್ಕೆ ಸಿದ್ಧವಾಗಿದ್ದೇವೆ” ಎಂದು ಕರ್ಣಿ ಸೇನಾ ನಾಯಕ ಲೋಕೇಂದ್ರ ಸಿಂಗ್ ಕಲ್ವಿ ಹೇಳಿದ್ದಾರೆ.
Next Story