ಯುಎಇ: ಮನೆಯಲ್ಲಿ ಅಗ್ನಿ ದುರಂತ: 7 ಮಕ್ಕಳು ಮೃತ್ಯು

ದುಬೈ, ಜ. 22: ಯುಎಇಯ ಫುಜಿರಾ ಪ್ರಾಂತದ ಮನೆಯೊಂದರಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 7 ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಾಡ್ನ ಗ್ರಾಮದಲ್ಲಿ ಸೋಮವಾರ ಮುಂಜಾನೆ ಮನೆಗೆ ಬೆಂಕಿ ಹೊತ್ತಿಕೊಂಡಾಗ ಮಕ್ಕಳು ಮಲಗಿದ್ದರು.
ಮೃತಪಟ್ಟವರು 5ರಿಂದ 13 ವರ್ಷ ಪ್ರಾಯದ ನಡುವಿನ ನಾಲ್ವರು ಹುಡುಗರು ಮತ್ತು ಮೂವರು ಹುಡುಗಿಯರು.
ಬೆಂಕಿ ಹೊತ್ತಿಕೊಳ್ಳಲು ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story