ಜುಗಾರಿ: ಎಂಟು ಮಂದಿ ಬಂಧನ
ಉಡುಪಿ, ಜ.22: ಬೆಳ್ಳೆ ಗ್ರಾಮದ ತೌಕೋಳಿ ಬ್ರಹ್ಮಸ್ಥಾನದ ಬಳಿ ಜ.21 ರಂದು ಸಂಜೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕೊಪ್ಪಳ ಜಿಲ್ಲೆಯ ಮೆಹಬೂಬ್(46), ಮೂಡುಬೆಳ್ಳೆಯ ರವಿ(32), ಸಂದೀಪ್, ಅಶ್ರಫ್ ಮಧಕರಿ, ಹಸನ್ ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿ, 5,790 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಬಂದರು ಸಮೀಪ ಜ. 22 ರಂದು ನಸುಕಿನ ವೇಳೆ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಹಂಗಾರಕಟ್ಟೆ ಯ ನಾಗರಾಜ್(24), ಯೋಗೀಶ್(23), ಸಂತೋಷ(38) ಎಂಬವರನ್ನು ಕೋಟ ಪೊಲೀಸರು ಬಂಧಿಸಿ, 2260 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





