ಚಾಯ್ ವಾಲಾ ಮಾತ್ರ ಯುವಜನರಿಗೆ ಪಕೋಡ ಮಾರುವಂತೆ ಹೇಳಬಲ್ಲ: ಪ್ರಧಾನಿಗೆ ಹಾರ್ದಿಕ್ ಪಟೇಲ್ ಚಾಟಿ

ಹೊಸದಿಲ್ಲಿ, ಜ.22: “ಟಿವಿ ಸಂದರ್ಶನವೊಂದರಲ್ಲಿ ಪಕೋಡ ಮಾರುವುದನ್ನು ನಿರುದ್ಯೋಗ ಎನ್ನುತ್ತೀರಾ” ಎಂದು ಪ್ರಧಾನಿ ಮೋದಿಯವರು ಪ್ರಶ್ನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್, “ಒಬ್ಬ ಚಾಯ್ ವಾಲಾ ಮಾತ್ರ ಯುವಜನರಿಗೆ ಪಕೋಡ ಮಾರುವಂತೆ ಹೇಳಬಲ್ಲ. ಒಬ್ಬ ಅರ್ಥಶಾಸ್ತ್ರಜ್ಞ ಖಂಡಿತಾ ಹೇಳಲಾರ” ಎಂದಿದ್ದಾರೆ.
ಟಿವಿ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಒಬ್ಬ ವ್ಯಕ್ತಿಯು ಪಕೋಡ ಮಾಡಿ ದಿನಂಪ್ರತಿ 200 ರೂ. ಗಳಿಸುತ್ತಿದ್ದರೆ ಅದನ್ನು ನಿರುದ್ಯೋಗವೆಂದು ಹೇಳುತ್ತೀರಾ’ ಎಂದು ಪ್ರಶ್ನಿಸಿದ್ದರು.
ಪ್ರಧಾನಿಯವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚುನಾವಣೆಗೂ ಮುನ್ನ ನೀಡಿದ್ದ 1 ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ ಮೋದಿ ಹೀಗೆ ಪ್ರತಿಕ್ರಿಯಿಸಿದ್ದರು. ಆದರೆ ಪಕೋಡ ಮಾರುವುದನ್ನು ಉದ್ಯೋಗ ಎಂದು ಪ್ರಧಾನಿ ಹೇಳಿದ್ದು ಹಾಗು ದಿನವೊಂದಕ್ಕೆ 200 ರೂ. ಸಾಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದು ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು.
Next Story