ಉಡುಪಿ: ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನ

ಉಡುಪಿ, ಜ.22: ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ದುರ್ಗಾ ವಾಹಿನಿಯ ವತಿಯಿಂದ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನವನ್ನು ಉಡುಪಿ ಎಂಜಿಎಂ ಕಾಲೇಜಿನ ಸಮೀಪ ಇಂದು ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ಲವ್ ಜಿಹಾದ್ ಹಿಂದೆ ಬಹಳ ದೊಡ್ಡ ಷಡ್ಯಂತ್ರ ಇದೆ. ನಾವು ಪ್ರೀತಿಯ ವಿರೋಧಿಗಳಲ್ಲ. ಆದರೆ ಪ್ರೀತಿ ಹೆಸರಿನಲ್ಲಿ ಷಡ್ಯಂತ್ರ ರೂಪಿಸುವುದನ್ನು ಖಂಡಿಸಲಾಗು ವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲವ್ ಜಿಹಾದ್ ವಿರುದ್ಧದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಖಂಡರಾದ ಸುನೀಲ್ ಕೆ.ಆರ್., ಸಂತೋಷ್ ಸುವರ್ಣ ಬೊಳ್ಜೆ, ದಿನೇಶ್ ಶೆಟ್ಟಿ, ರಮಾ ಜಿ.ರಾವ್, ಸುಪ್ರಭಾ ಆಚಾರ್ಯ, ಭಾಗ್ಯಶ್ರೀ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.
Next Story





