ಕಲ್ಲಾಪು: ರಸ್ತೆ ಅಪಘಾತಕ್ಕೆ ಯುವಕ ಬಲಿ

ಮಂಗಳೂರು, ಜ. 22: ದ್ವಿಚಕ್ರ ವಾಹನಕ್ಕೆ ಮೀನು ಸಾಗಾಟದ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ತೊಕ್ಕೊಟ್ಟಿನ ಕಲ್ಲಾಪು ಸಮೀಪ ಸೋಮವಾರ ರಾತ್ರಿ ನಡೆದಿದೆ.
ಅಂಬ್ಲಮೊಗರುವಿನ ಎಲಿಯಾರ್ ನಿವಾಸಿ ಬಶೀರ್ ಎಂಬವರ ಪುತ್ರ ಮುಹಮ್ಮದ್ ಶಾಕಿಬ್ (19) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಅವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಮೀನು ಸಾಗಾಟದ ಟೆಂಪೊ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ.
Next Story





