ರೋಹಿಣಿ ಸಿಂಧೂರಿ ಸೇರಿ 7 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜ.22: ರಾಜ್ಯ ಸರಕಾರ 7 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅದರಲ್ಲಿ ಮುಖ್ಯವಾಗಿ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಕೂಡ ಒಬ್ಬರಾಗಿದ್ದಾರೆ.
ಜುಲೈ 14, 2017ರಂದು ರೋಹಿಣಿ ಸಿಂಧೂರಿ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸದ್ಯ ರೋಹಿಣಿ ಸಿಂಧೂರಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.
ಇವರೊಂದಿಗೆ ಎಂ.ವಿ.ಜಯಂತಿ ಅವರನ್ನು ಕೆಎಟಿ ಮುಖ್ಯಸ್ಥರಾಗಿ, ವಿ.ಚೈತ್ರಾರನ್ನು ಕಾರ್ಮಿಕ ಇಲಾಖೆ ಆಯುಕ್ತರಾಗಿ, ಎಸ್.ಬಿ.ಶೆಟ್ಟಣ್ಣವರನ್ನು ಹಾವೇರಿ ಜಿಲ್ಲಾಧಿಕಾರಿಯಾಗಿ, ಎಂ.ವಿ.ವೆಂಕಟೇಶ್ ಹಾಸನ ಜಿಲ್ಲಾಧಿಕಾರಿಯಾಗಿ, ಡಾ.ಕೆ.ರಾಜೇಂದ್ರ ರಾಮನಗರ ಜಿಲ್ಲಾಧಿಕಾರಿಯಾಗಿ ಡಾ.ಬಿ.ಆರ್.ಮಮತಾ ಆಹಾರ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
Next Story





