ಯುವತಿಯನ್ನು ಜೀವಂತ ದಹಿಸಿದ ತಂದೆ, ಸಹೋದರ

ರಟಾಗಡ, ಜ. 23: ಹತ್ತೊಂಬತ್ತು ವರ್ಷದ ಯುವತಿಯನ್ನು ತಂದೆ ಹಾಗೂ ಸಹೋದರ ಜೀವಂತವಾಗಿ ದಹಿಸಿದ ಘಟನೆ ಲಾಲ್ಗಂಜ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಥೈಲಾಲ್ನಲ್ಲಿರುವ ಮನೆಗೆ ಪುತ್ರನೊಂದಿಗೆ ಪ್ರವೇಶಿಸಿದ ತಂದೆ ಪುತ್ರಿ ಅಂಜು ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ಘಟನೆ ನಡೆಯುವಾಗ ಮನೆಯಲ್ಲಿ ಯಾರೂ ಇರಲಿಲ್ಲ. ಅಂಜುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.
Next Story