ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳ ಬಿಡುಗಡೆ: ಅಭಿಪ್ರಾಯ ತಿಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶ

ಹೊಸದಿಲ್ಲಿ, ಜ. 23: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಏಳು ಅಪರಾಧಿಗಳಿಗೆ ಜೈಲು ಶಿಕ್ಷೆ ರದ್ದುಗೊಳಿಸುವ ತಮಿಳುನಾಡು ಸರಕಾರದ ಪ್ರಸ್ತಾಪದ ಕುರಿತ ನಿಲುವಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.
‘ಏನು ಬೇಕು’ ಎಂಬುದನ್ನು ಕೇಂದ್ರ ತಿಳಿಸುವ ಅಗತ್ಯತೆ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ ಹಾಗೂ ಮೂರು ತಿಂಗಳ ಕಾಲಾವಕಾಶ ನೀಡಿದೆ.
24 ವರ್ಷ ಜೈಲು ಶಿಕ್ಷೆ ಅನುಭವಿಸಿದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಪೇರರಿವಾಲನ್, ಮುರುಗನ್, ಸಂತಾನ್, ನಳಿನಿ, ರೋಬರ್ಟ್ ಪಿಯೂಸ್, ಜಯಕುಮಾರ್ ಹಾಗೂ ರವಿಚಂದ್ರನ್ ಅವರನ್ನು ಬಿಡುಗಡೆ ಮಾಡುವ ಅಬಿಪ್ರಾಯವನ್ನು ತಮಿಳುನಾಡು ಸರಕಾರ ವ್ಯಕ್ತಪಡಿಸಿತ್ತು.
ಈ ಪ್ರಕರಣ ವಿಚಾರಣೆಗೆ ಹಂತದಲ್ಲಿದೆ ಎಂದು ಹೇಳುವ ಮೂಲಕ ತಮಿಳುನಾಡು ಸರಕಾರದ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿತ್ತು.
Next Story