ಸೂರ್ಯೋದಯಕ್ಕೆ ಮೊದಲು ತಾಜ್‌ಮಹಲ್ ಪ್ರವೇಶಿಸಲು ಅವಕಾಶ
.jpg)
ಆಗ್ರಾ, ಜ. 23: ಸಂದರ್ಶಕರಿಗೆ ತಾಜ್‌ಮಹಲ್ ಪ್ರವೇಶಕ್ಕೆ ಗುರುವಾರದಿಂದ 30 ನಿಮಿಷ ಮುಂಚಿತವಾಗಿ ಅವಕಾಶ ನೀಡಲು ನಿರ್ಧರಿಸಲಾಗಿದೆ.
ತಾಜ್‌ಮಹಲ್ ವೀಕ್ಷಣೆಗೆ ಬೆಳಗ್ಗೆ 30 ನಿಮಿಷ ಮುಂಚಿತವಾಗಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಸಂಜೆ 45 ನಿಮಿಷ ಮುಂಚಿತವಾಗಿ ಬಂದ್ ಮಾಡಲಾಗುವುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.
ಪ್ರವಾಸಿಗಳ ಬೇಡಿಕೆ ಅನುಸರಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ವರಿಷ್ಠ ಭುವನ್ ವಿಕ್ರಮ್ ತಿಳಿಸಿದ್ದಾರೆ.
Next Story