ಶಿಕಾರಿಪುರ: ಬಂದ್ ಕರೆಗೆ ಜಯ ಕರ್ನಾಟಕ ಸಂಘಟನೆಯ ಬೆಂಬಲವಿಲ್ಲ; ಕೃಷ್ಣ ಹುಲಗಿ

ಶಿಕಾರಿಪುರ,ಜ.24: ಕಳಸಾ ಬಂಡೂರಿ, ಮಹದಾಯಿ ಜಾರಿಗೆ ಆಗ್ರಹಿಸಿ ಗುರುವಾರ ವಿವಿಧ ಕನ್ನಡಪರ ಸಂಘಟನೆಗಳ ಬಂದ್ ಕರೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲವಿಲ್ಲ ಎಂದು ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕೃಷ್ಣ ಹುಲಗಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು,ಕಳಸಾ ಬಂಡೂರಿ, ಮಹದಾಯಿ ನದಿ ನೀರಿಗೆ ಆಗ್ರಹಿಸಿ ಇದೇ 25 ರ ಗುರುವಾರ ಕರ್ನಾಟಕ ಬಂದ್‌ಗೆ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು, ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.ಈ ದಿಸೆಯಲ್ಲಿ ನೀರಿಗಾಗಿ ಹೋರಾಟವನ್ನು ಸಂಘಟನೆ ಬೆಂಬಲಿಸುತ್ತದೆ ಎಂದು ತಿಳಿಸಿದರು.
ಆದರೆ ತಾಲೂಕಿನಲ್ಲಿ ಈಗಾಗಲೇ ಹಲವು ಬಂದ್ ಕರೆಗಳಿಂದ ಜನತೆ, ವ್ಯಾಪಾರಸ್ಥರು ರೋಸಿ ಹೋಗಿದ್ದು, ಇದರೊಂದಿಗೆ ಸಮೀಪದ ಬಹು ಪ್ರಸಿದ್ದ ಹಿರೇಕೇರೂರು ದುರ್ಗಾಂಬಿಕಾ ಜಾತ್ರೆ ಹಿನ್ನಲೆಯಲ್ಲಿ ಬಂದ್ ಕರೆಯಿಂದ ಜನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀಳಲಿದೆ.ಈ ಹಿನ್ನಲೆಯಲ್ಲಿ ಬಂದ್ ಕರೆಯನ್ನು ಸಂಘಟನೆ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Next Story





