ಕಚ್ಚಿದಾಗ ಸಿಡಿದ ಐಫೋನ್ ಬ್ಯಾಟರಿ ; ವೀಡಿಯೋ ವೈರಲ್

ಬೀಜಿಂಗ್,ಜ.24 : ಚಿನ್ನದ ಶುದ್ಧತೆಯನ್ನು ಪರೀಕ್ಷಿಸಲು ಹಿಂದೆ ಅದನ್ನು ಕಚ್ಚುತ್ತಿದ್ದರಂತೆ. ಆದರೆ ಐಫೋನ್ ಬ್ಯಾಟರಿಯೊಂದನ್ನು ಕಚ್ಚಿದ ವ್ಯಕ್ತಿಯೊಬ್ಬ ವಸ್ತುಶಃ ಸಾವಿನ ದವಡೆಯಿಂದ ಪವಾಡಸದೃಶವಾಗಿ ಪಾರಾದ. ತೈವಾನಿನ ತೈಪೇಯಿಯಲ್ಲಿ ವ್ಯಕ್ತಿಯೊಬ್ಬ ತನ್ನ ಐಫೋನಿನ ಬ್ಯಾಟರಿ ಬದಲಾಯಿಸಬೇಕೆಂದು ಅಂಗಡಿಯೊಂದಕ್ಕೆ ಹೋಗಿದ್ದ. ಅಲ್ಲಿ ಆತನಿಗೆ ಹೊಸ ಬ್ಯಾಟರಿ ತೋರಿಸಲ್ಪಟ್ಟಾಗ ಆತ ಅದು ಒರಿಜಿನಲ್ ಬ್ಯಾಟರಿ ಹೌದೋ ಅಲ್ಲವೋ ಎಂದು ಪರೀಕ್ಷಿಸಲೆಂದು ಅದನ್ನು ಕಚ್ಚಿದ್ದನೆನ್ನಲಾಗಿದೆ. ಬಾಯಿ ತೆರೆದು ಬ್ಯಾಟರಿ ಹೊರತೆಗೆಯುತ್ತಿದ್ದಂತೆಯೇ ಅದು ಸಿಡಿದು ಬಿಟ್ಟಿತ್ತು. ಅದೃಷ್ಟವೆಂಬಂತೆ ಆತನ ಮುಖಕ್ಕಿಂತ ಸ್ವಲ್ಪವೇ ದೂರದಲ್ಲಿ ಅದು ಸಿಡಿದಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳುಂಟಾಗಿಲ್ಲ. ಆ ಸಂದರ್ಭ ಆ ಅಂಗಡಿಯಲ್ಲಿ ಬಹಳಷ್ಟು ಗ್ರಾಹಕರಿದ್ದರು. ಈ ಘಟನೆ ಸೀಸಿಟಿವಿಯಲ್ಲಿ ದಾಖಲಾಗಿದ್ದು ವೀಡಿಯೋ ವೈರಲ್ ಆಗಿದೆ. ಈಗಾಗಲೇ ಅದನ್ನು 40 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆನ್ನಲಾಗಿದೆ.
Next Story





