ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ ಭಡ್ತಿ, ಪಿಂಚಣಿ ಇತ್ಯರ್ಥಪಡಿಸಿ: ಬಸವರಾಜ ಹೊರಟ್ಟಿ

ಬೆಂಗಳೂರು, ಜ.24: ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ ಭಡ್ತಿ ಹಾಗೂ ಪಿಂಚಣಿ ನೀಡುವಲ್ಲಿನ ಸಮಸ್ಯೆಯನ್ನು ಸರಕಾರ ಕೂಡಲೆ ಇತ್ಯರ್ಥ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.
ಬುಧವಾರ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ನಿಗದಿ ಪಡಿಸುವ ಕುರಿತು ಪುನರ್ ಪರಿಶೀಲಿಸಲು ರಚಿಸಲಾದ ವಿಶೇಷ ಸದನ ಸಮಿತಿಯ ವರದಿಯನ್ನು ಸಭಾಪತಿ ಡಿ.ಎಚ್.ಶಂಕರಮೂರ್ತಿಗೆ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರಥಮ ಕಾಲೇಜುವರೆಗಿನ ಸುಮಾರು 25ಸಾವಿರ ಶಿಕ್ಷಕರು ತಮ್ಮ ವೇತನ ಭಡ್ತಿ ಹಾಗೂ ಪಿಂಚಣಿಗಾಗಿ ಹಲವಾರು ವರ್ಷಗಳಿಂದ ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಈ ಶಿಕ್ಷಕರಿಗೆ ವೇತನ ಭಡ್ತಿ, ಪಿಂಚಣಿ ಸೇರಿ ಒಟ್ಟಾರೆ 350ಕೋಟಿ ರೂ.ವೆಚ್ಚ ಆಗಲಿದೆ. ಅದನ್ನು ಸರಕಾರ ನೀಡುವ ಮೂಲಕ ಬಹು ದಿನದ ಬೇಡಿಕೆಯನ್ನು ಈಡೇರಿಸಬೇಕು ಎಂದು ಅವರು ತಿಳಿಸಿದರು.
Next Story





