ಭಟ್ಕಳ: ಆರ್.ಎನ್.ಎಸ್ ರೆಸಿಡೆನ್ಸಿಯಲ್ಲಿ ವಿದೇಶಿ ವಿನಿಮಯ ಮಾಹಿತಿ ಕಾರ್ಯಾಗಾರ

ಭಟ್ಕಳ, ಜ. 24: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ಶಾಖೆ ವಿದೇಶಿ ವಿನಿಮಯ ವಿಭಾಗ ದಿಂದ ಮುರ್ಡೇಶ್ವರ ಆರ್.ಎನ್.ಎಸ್ ರೆಸಿಡೆನ್ಸಿಯಲ್ಲಿ ಅಂತಿಮ ಡಿಪ್ಲೋಮಾ ಹಾಗೂ ಬಿ.ಕಾಂ. ವಿದ್ಯಾರ್ಥಿಗಳಿಗಾಗಿ ಸಿಂಡಿಕೇಟ್ ಬ್ಯಾಂಕ್ ಮುರುಡೇಶ್ವರ ಶಾಖೆ ಹಾಗೂ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಸಹಯೋಗದೊಂದಿಗೆ ವಿದೇಶಿ ವಿನಿಮಯ ಮಾಹಿತಿ ಕಾರ್ಯಾಗಾರ ಜರಗಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರಿಜರ್ವ ಬ್ಯಾಂಕ ಬೆಂಗಳೂರು ಶಾಖೆಯ ಪ್ರಾದೇಶಿಕ ನಿದೇರ್ಶಕ ಯುಜನ ಇ. ಕಾರ್ತಕರ, ಇತ್ತಿಚೆಗೆ ವಿದೇಶಿ ವಿನಿಮಯದ ಹೆಸರಿನಿಂದ ಲಾಟರಿ ಮತ್ತು ಇತರೇ ಆಮಿಷ ಒಡ್ಡಿ ಜನರಿಗೆ ಮೋಸ ಮಾಡಲಾಗುತ್ತಿದೆ. ಶಿಕ್ಷಿತರು ಕೂಡ ಅತೀ ಆಸೆಗೆ ಬಲಿಯಾಗುತ್ತಿದ್ದಾರೆ ಎಂದರು.
ಸಿಂಡಿಕೇಟ್ ಬ್ಯಾಂಕ್ ರಿಜನಲ್ ಮೆನೇಜರ್ ಶೈಲಾ, ಮುಂಬಯಿ ರಿಜರ್ವ ಬ್ಯಾಂಕ್ ಅಸಿಸ್ಟಂಟ ಜನರಲ್ ಮೆನೇಜರ್ ಕಮಲೇಶ ಶರ್ಮ. ಆರ್.ಎನ್.ಎಸ್. ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕ ಎಮ್.ವಿ.ಹೆಗಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಿಜರ್ವ ಬ್ಯಾಂಕ ಬೆಂಗಳೂರಿನ ಜನರಲ್ ಮೆನೇಜರ್ ಸುದೀಪ ಅಧ್ಯಕ್ಷತೆ ವಹಿಸಿದ್ದರು.
FEMA (Foreign Exchange Management Act) ಕಮಲೇಶ ಶರ್ಮಾ, ಎಫ್.ಡಿ.ಐ ಕುರಿತಂತೆ ರಶ್ಮಿ ಮೆನನ್, ವಿದೇಶಿ ವಿನಿಮಯ ಸೌಲಭ್ಯ ಗಳು ಕುರಿತು ಸೆಲ್ವಸ್ಟರ್ ಡಿಸೋಜಾ ಹಾಗೂ ದೇವೆಂದ್ರ ಬಿ. ರವರು ಆಯಾತ ಹಾಗೂ ನಿರ್ಯಾತಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ದೇವೆಂದ್ರ ಬಿ. ವಂದನಾರ್ಪಣೆಗೈದರು. ಸಂಪನ್ನ ರಶ್ಮಿ ನಿರೂಪಿಸಿದರು.







