ಜ.26: ನಾಟ್ಯನಿಕೇತನ ವಾರ್ಷಿಕೋತ್ಸವ
ಮಂಗಳೂರು, ಜ.24: ಪಂದನಲ್ಲೂರು ನೃತ್ಯ ಪರಂಪರೆಯಲ್ಲಿ ಭರತನಾಟ್ಯ ಶಾಸ್ತ್ರೀಯ ನೃತ್ಯಕಲೆಯನ್ನು ಕಲಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಕೊಲ್ಯ ಸೋಮೇಶ್ವರದಲ್ಲಿ ಪ್ರಾರಂಭಗೊಂಡ ‘ ನಾಟ್ಯನಿಕೇತನ’ ಕೊಲ್ಯ ನೃತ್ಯ ಸಂಸ್ಥೆಯು 60ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. 60ರ ವರ್ಷಾಚರಣೆಯ ಪ್ರಯುಕ್ತ ‘ನಾಟ್ಯ ಮೋಹನಂ ನೃತ್ಯ ಕಾರ್ಯಕ್ರಮ ಜ. 26ರಂದು ಸಂಜೆ 3:30ಕ್ಕೆ ಉಳ್ಳಾಲ ಅಂಬಿಕಾರೋಡ್‌ನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ.
ನಾಟ್ಯನಿಕೇತನದ ಸ್ಥಾಪಕ ಶಾಂತಲಾ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ‘ನಾಟ್ಯ ಮೋಹನಂ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಜೆ 3:30ರಿಂದ ನಾಟ್ಯನಿಕೇತನದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ನಾಟ್ಯನಿಕೇತನದ ಹಿರಿಯ ವಿದ್ಯಾರ್ಥಿನಿ ಶೀಲಾ ಜಗದೀಶ್ ಕುಮಾರ್ ಚಾಲನೆ ನೀಡಲಿದ್ದಾರೆ.
Next Story





