ವಿದ್ಯುತ್ ಆಘಾತಕ್ಕೆ ಅಪರೂಪದ ‘ಬಿಳಿ’ ಗೂಬೆ ಬಲಿ

ಉಡುಪಿ, ಜ.24: ಬನ್ನಂಜೆಯ ವಿಜಯ ಬ್ಯಾಂಕ್ ಸಮೀಪ ಅಪರೂಪದ ಬಿಳಿ ಬಣ್ಣದ ಗೂಬೆಯೊಂದು ವಿದ್ಯುತ್ ತಂತಿಯ ಸ್ಪರ್ಶದಿಂದ ಸಾವನ್ನಪ್ಪಿರು ವುದು ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿ ದೇವರಾಜ್ ಪಾಣ ಅವರಿಗೆ ಗೂಬೆಯ ಕಳೇಬರವನ್ನು ಹಸ್ತಾಂತರಿಸಲಾಯಿತು. ಬಳಿಕ ಆದಿ ಉಡುಪಿಯ ಅರಣ್ಯ ಇಲಾಖೆಯ ವಠಾರದಲ್ಲಿ ಗೂಬೆಯ ಕಳೇಬರವನ್ನು ದಫನ ಮಾಡಲಾಯಿತು.
Next Story





