ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ವರದಿ ನಿಷೇದ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

ಮುಂಬೈ, ಜ. 25: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ಪತ್ರಕರ್ತರು ಪ್ರಕಟಿಸುವುದು ಅಥವಾ ವರದಿ ಮಾಡುವುದನ್ನು ನಿಷೇಧಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯ ಬುಧವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿ ರೇವತಿ ಮೋಹಿತಿ ದೇರೆ, ‘‘ನಿಜವಾಗಿಯೂ ಈ ಪ್ರಕರಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ.’’ ಎಂದರು.
ವಿಚಾರಣೆ ಬಗ್ಗೆ ಮಾಧ್ಯಗಳು ವರದಿ ಮಾಡುವುದನ್ನು ನಿರ್ಬಂಧಿಸುವ ಸಿಬಿಐ ನ್ಯಾಯಾಲಯದ ನವೆಂಬರ್ 29ರ ಆದೇಶದ ವಿರುದ್ಧ 9 ಮಂದಿ ಪತ್ರಕರ್ತರು ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ರೇವತಿ ಮೋಹಿತಿ ವಿಚಾರಣೆ ನಡೆಸಿದರು.
ಮಾಧ್ಯಮ ಸಮಾಜದ ಪ್ರಭಾವಶಾಲಿ ಕಾವಲು ನಾಯಿ ಎಂದು ಹೇಳಿರುವ ದೇರೆ, ಸಾರ್ವಜನಿಕರಿಗೆ ಮಾಹಿತಿ ನೀಡುವ ಅತಿ ದೊಡ್ಡ ಉದ್ದೇಶದಿಂದ ಮಾಧ್ಯಮ ಸೇವೆ ಸಲ್ಲಿಸುತ್ತಿದೆ ಎಂದರು.
Next Story





